ರಾಜಕೀಯ ಹಿತಾಸಕ್ತಿಗಾಗಿ ನೋಟು ನಿಷೇಧ: ಮಾಯಾವತಿ

ಮೋದಿ ಸರ್ಕಾರ ಆತುರಾತುರವಾಗಿ ರಾಜಕೀಯ ಹಿತಾಸಕ್ತಿಗಾಗಿ ನೋಟು ನಿಷೇಧ ಮಾಡಿರುವುದು ಶೇ.ನೂರಕ್ಕೆ ನೂರರಷ್ಟು ಸತ್ಯ ಎಂದು ಬಿಎಸ್ ಪಿ ಮುಖ್ಯಸ್ಥೆ ..
ಮಾಯಾವತಿ
ಮಾಯಾವತಿ

ನವದೆಹಲಿ: ಮೋದಿ ಸರ್ಕಾರ ಆತುರಾತುರವಾಗಿ ರಾಜಕೀಯ ಹಿತಾಸಕ್ತಿಗಾಗಿ ನೋಟು ನಿಷೇಧ ಮಾಡಿರುವುದು ಶೇ.ನೂರಕ್ಕೆ ನೂರರಷ್ಟು ಸತ್ಯ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ರಾಜಕೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಈ ನಿರ್ಧಾರ ತೆಗೆದು ಕೊಂಡಿದ್ದಾರೆ, ಆದರೆ ಶೇ. 90ರಷ್ಟು ಜನ ಸಾಮಾನ್ಯರಿಗೆ ಇದರಿಂದ ತೊಂದರೆ ಆಗಿದೆ, ಆದರೆ ತಾವು ಮಾಡಿರುವ ತಪ್ಪು ಸರಿಯಾದ ಕ್ರಮ ಎಂದು ದೇಶದ ಜನತೆ ಮುಂದೆ ಮೋದಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಿಎಸ್ ಪಿ ಪ್ರಬಲ ಪ್ರತಿಸ್ಪರ್ದಿಯಾಗಲಿದೆ, ಆದರೆ ಬಿಜೆಪಿಯ ಕೆಲ ನಾಯಕರು ಬಿಜೆಪಿ ವಿರುದ್ಧ ಆಧಾರವಿಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಆತುರಾತುರವಾಗಿ ಮೋದಿ ಅವರು 500 ಹಾಗೂ 1000 ರು ನೋಟು ನಿಷೇಧಿಸಿರುವುದು ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com