ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಬ್ಬರು ನಕ್ಸಲರ ಹತ್ಯೆ ಪ್ರಕರಣ: ಕೇರಳ ಸರ್ಕಾರದಿಂದ ನ್ಯಾಯಾಂಗ ತನಿಖೆ

ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರ ಇತ್ತೀಚೆಗೆ ಕೇರಳದ ನೀಲಂಬುರ್ ಕಾಡಿನಲ್ಲಿ ನಡೆದ ಇಬ್ಬರು ಮಾವೋವಾದಿಗಳ ಹತ್ಯೆ ಪ್ರಕರಣವನ್ನು ..

ತಿರುವನಂತಪುರ: ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರ ಇತ್ತೀಚೆಗೆ ಕೇರಳದ ನೀಲಂಬುರ್ ಕಾಡಿನಲ್ಲಿ ನಡೆದ ಇಬ್ಬರು ಮಾವೋವಾದಿಗಳ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದೆ.

ಪ್ರರರಣದ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ. ಮಲ್ಲಪ್ಪುರಂ ಜಿಲ್ಲೆಯಲ್ಲಿ ನಡೆದ ಈ ಎನ್ ಕೌಂಟರ್ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ನೀಡಲಾಗಿತ್ತು. ಆದರೆ ಮಾನವ ಹಕ್ಕುಗಳ ಕಾರ್ಯಕರ್ತರು ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.

ನವೆಂಬರ್ 24 ರಂದು ನಕ್ಸಲರಾದ ಕುಪ್ಪುಸ್ವಾಮಿ ದೇವರಾಜು ಮತ್ತು ಅಜಿತಾ ಎಂಬುವರನ್ನು ನಿಲಂಬುರ್ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಲಾಗಿತ್ತು. ಪಶ್ಚಿಮ ಘಾಟ್ ನ ಸುಮಾರು 500 ಎಕರೆ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಸುಧಾರಿತ ಸ್ಫೋಟಕಗಳು, ಸ್ಫೋಟಕ್ಕೆ ಬಳಸುವ ಹಲವು ವಸ್ತುಗಳು, ಸೋಲಾರ್ ಪ್ಯಾನೆಲ್, ಬ್ಯಾಟರಿ ಚಾರ್ಜರ್, ಪೆನ್ ಡ್ರೈವ್, ಆಧುನಿಕ ಟ್ಯಾಬ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com