ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿಯನ್ನು ಕಿತ್ತೆಸೆಯಿರಿ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ; ಎಲ್ಲರೂ ನ್ಯಾಯಾಂಗದ ವ್ಯಾಪ್ತಿಯೊಳಗಿದ್ದಾರೆ, ಯಾರೋಬ್ಬರು ಲಕ್ಷ್ಣಣ ರೇಖೆಯನ್ನು ದಾಟಬಾರದು ಎಂದು ಅರ್ಥ ರಹಿತ ಹೇಳಿಕೆ ನೀಡಿರುವ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತೆಸೆಯಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಅರ್ಥವಿಲ್ಲದ ಲಕ್ಷ್ಣಣ ರೇಖೆ ಎಂಬ ಹೇಳಿಕೆ ನೀಡುತ್ತಿರುವ ಅಟಾರ್ನಿ ಜನರಲ್ ಅವರನ್ನು ಕಿತ್ತೊಗೆಯಬೇಕು ಎಂದು ಹೇಳಿರುವ ಅವರು, ಸೀತೆ ಯಾಕೆ ರೇಖೆ ದಾಟಿದ್ದು ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ದಿನವಾದ ನಿನ್ನೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ದೇಶದಲ್ಲಿ ಒಟ್ಟು 500 ಜಡ್ಜ್ ಗಳ ಹುದ್ದೆ ಖಾಲಿ ಇದೆ ಎಂದು ಹೇಳಿದ್ದರು. ಈ ವೇಳೆ ಮುಕುಲ್ ರೋಹ್ಟಗಿ ಮಾತನಾಡಿ ಪ್ರತಿಯೊಬ್ಬರು ನ್ಯಾಯಾಂಗದ ಪರಿಮಿತಿಯೊಳಗೆ ಬರುತ್ತಾರೆ, ಹೀಗಾಗಿ ಯಾರೂ ಕೂಡ ರೇಖೆಯನ್ನು ದಾಟಬಾರದು ಎಂದು ಹೇಳಿದ್ದರು.
ಇದಕ್ಕೂ ಮೊದಲು ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ಠಾಕೂರ್ , ನ್ಯಾಯಾಧೀಶರುಗಳಿಲ್ಲದೇ ನ್ಯಾಯಾಲಯದ ಕೊಠಡಿಗಳು ಖಾಲಿ ಹೊಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ