ಸ್ಮೃತಿ ಇರಾನಿ
ದೇಶ
ಕಿತ್ತು ಹೋಗಿದ್ದ ಚಪ್ಪಲಿ ಹೊಲಿಸಿಕೊಂಡು 10 ರು. ಬದಲಿಗೆ 100 ರು, ಕೊಟ್ಟ ಸ್ಮೃತಿ ಇರಾನಿ
ಸದಾ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ...
ಕೊಯಮತ್ತೂರ್: ಸದಾ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.
ತಮಿಳುನಾಡಿನ ಇಶಾ ಫೌಂಡೇಷನ್ ಕಾರ್ಯಕ್ರಮವೊಂದರ ನಿಮಿತ್ತ ತೆರಳುವಾಗ ಮಾರ್ಗ ಮಧ್ಯೆ ಪೆರೂರ್ ಎಂಬಲ್ಲಿ ಕಾರು ನಿಲ್ಲಿಸಿ ವಿಮಾನದಿಂದ ಇಳಿಯುವ ಕಿತ್ತು ಹೋಗಿದ್ದ ಚಪ್ಪಲಿಯನ್ನು ಹೊಲಿಸಿಕೊಂಡಿದ್ದಾರೆ. ಚಮ್ಮಾರ 10 ರುಪಾಯಿ ಕೇಳಿದ್ದಕ್ಕೆ 100 ರುಪಾಯಿ ನೀಡಿದ್ದಾರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಇರಾನಿ ಕಾಫಿ ಅಂಗಡಿಯೊಂದಕ್ಕೆ ತೆರಳಿ ಸರದಿಯಲ್ಲಿ ನಿಂತು ಕಾಫಿ ಪಡೆದ ಫೋಟೋಗಳು ವೈರಲ್ ಆಗಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ