ಟ್ಯಾಕ್ಸಿ ಚಾಲಕನ ಜನಧನ್ ಖಾತೆಯಲ್ಲಿದ್ದದ್ದು ಬರೋಬ್ಬರಿ 9 ಸಾವಿರ ಕೋಟಿ!

ಪಂಜಾಬ್‍ನ ಟ್ಯಾಕ್ಸಿ ಡ್ರೈವರ್ ಬಲ್ವಿಂದರ್ ಸಿಂಗ್ ಅವರ ಜನಧನ್ ಖಾತೆಗೆ ಸುಮಾರು 98,05, 95, 12,231 ಕೋಟಿ ರು ಹಣ ಜಮೆಯಾಗಿದೆ ....
ಟ್ಯಾಕ್ಸಿ ಚಾಲಕ ಬಲ್ವೀಂದರ್ ಸಿಂಗ್
ಟ್ಯಾಕ್ಸಿ ಚಾಲಕ ಬಲ್ವೀಂದರ್ ಸಿಂಗ್

ಪಂಜಾಬ್: ಟ್ಯಾಕ್ಸಿ ಡ್ರೈವರ್ ನ ಜನಧನ್ ಖಾತೆಗೆ ಸುಮಾರು 9 ಸಾವಿರ ಕೋಟಿ ಹಣ ಜಮೆಯಾಗಿದೆ ಎಂದು ವ್ಯಕ್ತಿಯೊಬ್ಬರಿಗೆ ಸಂದೇಶ ಬಂದಿದೆ. ಇದನ್ನು ನೋಡಿದ ಚಾಲಕ ಹೌಹಾರಿದ್ದಾನೆ.

ಪಂಜಾಬ್‍ನ ಟ್ಯಾಕ್ಸಿ ಡ್ರೈವರ್ ಬಲ್ವಿಂದರ್ ಸಿಂಗ್ ಅವರ ಜನಧನ್ ಖಾತೆಗೆ ಸುಮಾರು 98,05, 95, 12,231 ಕೋಟಿ ರು ಹಣ ಜಮೆಯಾಗಿದೆ ಎಂದು ಮೆಸೇಜ್ ಬಂದಿದೆ. ಇದರಿಂದ ಗಾಬರಿಗೊಂಡ ಆತ ಬ್ಯಾಂಕ್ ಗೆ ತೆರಳಿ ಪಾಸ್ ಬುಕ್ ಎಂಟ್ರಿ ಮಾಡಿಕೊಡಲು ಕೇಳಿದ್ದಾನೆ, ಆದರೆ ಬ್ಯಾಂಕ್ ಸಿಬ್ಬಂದಿ ನಾಳೆ ಬರುವಂತೆ ಹೇಳಿ ಕಳುಹಿಸಿದ್ದಾರೆ.

ಇಷ್ಟೊಂದು ಹಣ ತನ್ನ ಖಾತೆಗೆ ಜಮೆಯಾಗಿದೆ ಬಲ್ವಿಂದರ್ ಸಿಂದ್ ಸಂಭ್ರಮಿಸಿದ್ದ, ಯಾವಾಗಲು ತನ್ನ ಖಾತೆಯಲ್ಲಿ ಮೂರು ಸಾವಿರ ಹಣ ಮಾತ್ರ ಇರುತ್ತಿತ್ತು, ಆದರೆ ಏಕಾಏಕಿ ಕೋಟಿಗಟ್ಟಲೇ ಹಣ ಬ್ಯಾಂಕ್ ಖಾತೆಗೆ ಜಮಾವಣೆ ಆದದ್ದು ಆತನಿಗೆ ಭಾರಿ ಸಂತೋಷ ತಂದಿತ್ತು,  ಆದರೆ ಆತನ ಸಂಭ್ರಮಾ ತುಂಬಾ ಹೊತ್ತು ಇರಲಿಲ್ಲ. ಅಷ್ಟಕ್ಕೂ ಬಲ್ವಿಂದರ್ ಅವರ ಖಾತೆಗೆ ಕೋಟ್ಯಾಂತರ ರೂ. ಹಣ ಜಮೆ ಆಗಿರಲೇ ಇಲ್ಲ. ಬ್ಯಾಂಕ್ ಸಿಬ್ಬಂದಿಯ ಒಂದು ಸಣ್ಣ ಕೈ ತಪ್ಪು ಬಲ್ವಿಂದರ್ ಸಿಂಗ್‍ರನ್ನು ಒಂದು ಕ್ಷಣ ಕೋಟ್ಯಾಧೀಶ್ವರರನ್ನಾಗಿ ಮಾಡಿತ್ತು.

200 ರೂಪಾಯಿಯ ಕ್ರೆಡಿಟ್ ಎಂಟ್ರಿ ಮಾಡೋ ಬದಲು ಸಹಾಯಕ ಅಕೌಂಟ್ ಮ್ಯಾನೇಜರ್ ಬ್ಯಾಂಕಿನ 11 ಅಂಕಿಗಳ ಇಂಟರ್ನಲ್ ಬ್ಯಾಂಕಿಂಗ್ ಲೆಡ್ಜರ್ ಅಕೌಂಟ್ ನಂಬರನ್ನ ಹಣದ ಮೊತ್ತದ ಕಾಲಮ್‍ನಲ್ಲಿ ಬರೆದಿದ್ದರು ಎಂದು ಬ್ಯಾಂಕ್ ಮ್ಯಾನೇಜರ್ ಸಂದೀಪ್ ಗಾರ್ಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಈ ರೀತಿ ತಪ್ಪಾಗಿರುವುದು ಮರುದಿನ ಗೊತ್ತಾಗಿದ್ದು, ಮುನ್ನವೇ ಅದನ್ನು ಸರಿಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com