ಪಾಕಿಸ್ತಾನಕ್ಕೆ ಬುಲೆಟ್ ಭಾಷೆಯಲ್ಲಿ ಉತ್ತರಿಸಲು ಭಾರತಕ್ಕೆ ಸದಾವಕಾಶ: ಬಿಜೆಪಿ

ನಗ್ರೋಟಾ ಸೇನಾ ನೆಲೆ ಮೇಲೆ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನ ದುಬಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಬಿಜೆಪಿ ...
ನಗ್ರೋಟಾದಲ್ಲಿ ನಡೆದ ದಾಳಿ ನಂತರ ಗಡಿ ಕಾಯುತ್ತಿರುವ  ಸೈನಿಕರು
ನಗ್ರೋಟಾದಲ್ಲಿ ನಡೆದ ದಾಳಿ ನಂತರ ಗಡಿ ಕಾಯುತ್ತಿರುವ ಸೈನಿಕರು

ಜಮ್ಮು: ನಗ್ರೋಟಾ ಸೇನಾ ನೆಲೆ ಮೇಲೆ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನ ದುಬಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಸಿದೆ.

ನಗ್ರೋಟಾ ಸೇನಾ ನೆಲೆಯ ಮೇಲೆ ನಡೆದ ಉಗ್ರ ದಾಳಿಯಲ್ಲಿ ಇಬ್ಬರು ಮೇಜರ್ ಸೇರಿದಂತೆ ಒಟ್ಟು 7 ಮಂದಿ ಹುತಾತ್ಮರಾಗಿದ್ದಾರೆ. ಇದು ನಮ್ಮ ಯೋಧರ ಕೆಚ್ಚೆದೆಯ ಹೋರಾಟವಾಗಿದೆ. ಸಾವಿಗೆ ಅಂಜದೇ ಒತ್ತೆಯಾಗಿಸಿಕೊಂಡ ಯೋಧರ ಪತ್ನಿ ಹಾಗೂ ಮಕ್ಕಳನ್ನು ಉಗ್ರರಿಂದ ಕಾಪಾಡಿದ್ದಾರೆ ಎಂದು ಬಿಜೆಪಿ ಮುಖಂಡ ರವೀಂದರ್ ರೈನಾ ಹೇಳಿದ್ದಾರೆ.

ಪಾಕಿಸ್ತಾನದ ಒಳಸಂಚಿನಿಂದಾಗಿ ದೇಶದ ಏಕತೆ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಉರಿ ಹಾಗೂ ಪಠಾಣ್ ಕೋಟ್ ಸೇನಾ ನೆಲೆ ಮೇಲೆ ನಡೆದ ದಾಳಿಯಂತೆ ನಗ್ರೋಟಾದಲ್ಲೂ ನಡೆಸಲು ಪಾಕ್ ಉಗ್ರರು ಯೋಜನೆ ರೂಪಿಸಿದ್ದರು. ಆದರೆ ಭಾರತೀಯ ಯೋಧರ ಸಮಯ ಪ್ರಜ್ಞೆಯಿಂದ ಉಗ್ರರಿಗೆ ತಕ್ಕ ಉಚತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ರಾಜತಾಂತ್ರಿಕ ಭಾಷೆ ಅರ್ಥವಾಗುವುದಿಲ್ಲ ಎನ್ನಿಸುತ್ತದೆ, ಅದಕ್ಕೆ ಬುಲೆಟ್ ಭಾಷೆ ಮಾತ್ರ ಅರಥವಾಗುತ್ತದೆ. ಹೀಗಾಗಿ ಭಾರತ ಸರ್ಕಾರ ಗಡಿ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಬುಲೆಟ್ ನಲ್ಲೇ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com