ಡಿ.1 ರಂದು ಬೆಳಿಗ್ಗೆ ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಮ್ಲಾ: ಡಿ.1 ರಂದು ಬೆಳಿಗ್ಗೆ ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಿಗ್ಗೆ 4.12 ರ ವೆಳೆಗೆ ಸಂಭವಿಸಿರುವ ಭೂಕಂಪದ ತೀವ್ರತೆ ರಿಕ್ಟಾರ್ ಮಾಪಕದಲ್ಲಿ 3.3 ದಾಖಲಾಗಿದೆ ಎಂದು ಹಿಮಾಚಲ ಪ್ರದೇಶದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಲ್ಲುವಿನಲ್ಲಿ ಭೂಕಂಪದ ಕೇಂದ್ರ ದಾಖಲಾಗಿದ್ದು, ಆದರೆ ಕುಲ್ಲುವಿನ ಪಕ್ಕದ ಜಿಲ್ಲೆ ಮಂಡಿಯಲ್ಲೂ ಸಹ ಭೂಕಂಪನದ ಅನುಭವ ಉಂಟಾಗಿದೆ.