ಗಾಂಧಿ ಜಯಂತಿ ದಿನ ಗೋಡ್ಸೆ ಪ್ರತಿಮೆ ಅನಾವರಣ!

ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರೆ, ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಪ್ರತಿಮೆಯನ್ನು ಮೀರಟ್ ನಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಸಂಘಟನೆ ಅನಾವರಣ ಮಾಡಿದೆ.
ನಾಥುರಾಮ್ ಗೋಡ್ಸೆ ಪ್ರತಿಮೆ ಅನಾವರಣ
ನಾಥುರಾಮ್ ಗೋಡ್ಸೆ ಪ್ರತಿಮೆ ಅನಾವರಣ

ಮೀರಟ್: ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರೆ,  ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಪ್ರತಿಮೆಯನ್ನು ಮೀರಟ್ ನಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಸಂಘಟನೆ ಅನಾವರಣ ಮಾಡಿದೆ.

2014 ರಿಂದ ವಿವಾದ ಸೃಷ್ಟಿಸಿದ್ದ ಗೋಡ್ಸೆ ಪ್ರತಿಮೆ ಕೊನೆಗೂ ಪ್ರತಿಷ್ಠಾಪನೆಯಾಗಿದ್ದು, ಗಾಂಧಿ ಜಯಂತಿಯ ದಿನವನ್ನು ದಿಕ್ಕಾರ್ ದಿವಸ್ ನ್ನಾಗಿ ಆಚರಣೆ ಮಾಡಿ, ಗೋಡ್ಸೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಗ್ಗೆ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಶರ್ಮಾ, 2014 ರಲ್ಲಿ ಶಂಕುಸ್ಥಾಪನೆ ಮಾಡಿದ ಬೆನ್ನಲ್ಲೇ ಗೋಡ್ಸೆ ಪ್ರತಿಮೆಯನ್ನು ಅನಾವರಣ ಮಾಡಲು ಯತ್ನಿಸಿದ್ದೆವು. ಆದರೆ ಇದನ್ನು ವಿರೋಧಿಸಿದ್ದ ಬಲಪಂಥೀಯ ಸಂಘಟನೆ ಪೊಲೀಸರಿಗೆ ದೂರು ನೀಡಿ ಕೋರ್ಟ್ ವರೆಗೆ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು. ಆ ನಂತರ ಕೋರ್ಟ್ ಆದೇಶದಂತೆ ಗೋಡ್ಸೆ ಪ್ರತಿಮೆ ಇದ್ದ ಪ್ರದೇಶವನ್ನು ಮುಚ್ಚಲಾಗಿತ್ತು. ಈ ಬಾರಿ ಕಠಿಣ ಎಚ್ಚರಿಕೆ ನೀಡುವ ಮೂಲಕ ಗೋಡ್ಸೆ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ ಎಂದು ಅಶೋಕ್ ಶರ್ಮಾ ತಿಳಿಸಿದ್ದಾರೆ.

"ಭಾರತೀಯರು ಗಾಂಧಿಯನ್ನು ಅನುಸರಿಸುವುದನ್ನು ಬಿಟ್ಟು ಗೋಡ್ಸೆಯನ್ನು ಆರಾಧಿಸಬೇಕು ಎಂಬುದನ್ನು ನಮ್ಮ ಇಂದಿನ ನಡೆ ಸುಚಿಸ್ತೂತ್ತದೆ ಎಂದು ಅಶೋಕ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com