ಭಾರತೀಯ ಸೇನೆ ಉಗ್ರರಿಗೆ ಯೋಗ್ಯ ಉತ್ತರ ನೀಡಿದೆ: ರಾಜನಾಥ್ ಸಿಂಗ್

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸೇನಾ ಶಿಬಿರ ಮೇಲಿನ ಉಗ್ರರ ದಾಳಿಗೆ ಭಾರತೀಯ ಯೋಧರು ಯೋಗ್ಯ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ...

ಲೇಹ್: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸೇನಾ ಶಿಬಿರ ಮೇಲಿನ ಉಗ್ರರ ದಾಳಿಗೆ ಭಾರತೀಯ ಯೋಧರು ಯೋಗ್ಯ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಿಗೆ ಎರಡು ದಿನದ ಭೇಟಿಗಾಗಿ ತೆರಳಿರುವ ರಾಜನಾಥ್ ಸಿಂಗ್ ಅವರಿಗೆ ಪತ್ರಕರ್ತರು ಮತ್ತೆ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಉಗ್ರರ ದಾಳಿಯನ್ನು ಸರಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಸೇನೆ ಮೇಲೆ ದಾಳಿ ನಡೆಸಲು ಬಂದಿದ್ದ ಉಗ್ರರಿಬ್ಬರನ್ನು ಸೇನೆ ಸದೆಬಡಿದಿದ್ದು, ಮತ್ತೋರ್ವ ಜೀವ ಭಯದಿಂದ ಪರಾರಿಯಾಗುವಂತೆ ಸೇನೆ ಮಾಡಿದ್ದು ಇದು ಸೇನೆ ಉಗ್ರರಿಗೆ ನೀಡಿದ ಯೋಗ್ಯ ಉತ್ತರ ಎಂದು ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ವಿರುದ್ಧ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಿಂದಾಗಿ ತತ್ತರಿಸಿರುವ ಪಾಕಿಸ್ತಾನ ಹಾಗೂ ಪಾಕ್ ಮೂಲದ ಉಗ್ರರ ಸಂಘಟನೆಗಳು ಭಾರತದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಅಪಹಪಿಸುತ್ತಿವೆ. ಈ ಹಿನ್ನೆಲೆ ಯೋಧರ ಸೀಮಿತ ದಾಳಿಯಾಗಿ ನಾಲ್ಕು ದಿನಗಳ ಬಳಿಕ ಉಗ್ರರು ಸೇನಾ ಶಿಬಿರದ ಮೇಲೆ ದಾಳಿಗೆ ಮುಂದಾಗಿದ್ದಾರೆ. ಆದರೆ ಅವರ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದರು.

ಸದ್ಯ ಕಾಶ್ಮೀರ ಸಮಸ್ಯೆ ಕುರಿತಂತೆ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಪ್ರವಾಸ ನಡೆಸುತ್ತಿದ್ದು, ಸ್ಥಳೀಯರ ಸಮಸ್ಯೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿ ಅವರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಕಳೆದ ರಾತ್ರಿ 10.30ರ ಸುಮಾರಿಗೆ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ನ್ನು ಗುರಿಯಾಗಿಸಿಕೊಂಡು ಉಗ್ರರ ಗುಂಪೊಂದು ದಾಳಿ ನಡೆಸಿತ್ತು. ಶಿಬಿರದ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದು ಪರಿಣಾಮ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com