ಪಿಒಕೆಯಲ್ಲಿ ಉಗ್ರ ನೆಲೆಯನ್ನು ಸಂಪೂರ್ಣ ನಾಶ ಮಾಡಲು 6 ತಿಂಗಳು ಸಾಕು: ಸೇನೆ

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲು 6 ತಿಂಗಳ ಕಾಲಾವಕಾಶ ಸಾಕು ಎಂದು ಭಾರತೀಯ ಸೇನೆ ಕಾರ್ಯಾಂಗದ ಪ್ರಮುಖರಿಗೆ ತಿಳಿಸಿರುವ ಬಗ್ಗೆ ವರದಿ ಪ್ರಕಟವಾಗಿದೆ.
ಭಾರತೀಯ ಸೇನೆ
ಭಾರತೀಯ ಸೇನೆ
Updated on: 

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲು 6 ತಿಂಗಳ ಕಾಲಾವಕಾಶ ಸಾಕು ಎಂದು ಭಾರತೀಯ ಸೇನೆ ಕಾರ್ಯಾಂಗದ ಪ್ರಮುಖರಿಗೆ ತಿಳಿಸಿರುವ ಬಗ್ಗೆ ವರದಿ ಪ್ರಕಟವಾಗಿದೆ.

ನಿರಂತರವಾಗಿ ಆರು ತಿಂಗಳ ಸೇನಾ ಕಾರ್ಯಾಚರಣೆ ನಡೆಸಿದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ನಂತರ ಕಾರ್ಯಾಂಗದ ಪ್ರಮುಖರಿಗೆ ಮಾಹಿತಿ ನೀಡಿದೆ.

ಭಯೋತ್ಪಾದಕರ ಲಾಂಚ್ ಪ್ಯಾಡ್ ಗಳನ್ನೂ ಸಂಪೂರ್ಣವಾಗಿ ನಾಶ ಮಾಡಲು ನಿರಂತರ ಆರು ತಿಂಗಳ ಸೇನಾ ಕಾರ್ಯಾಚರಣೆ ನಡೆಸುವ ಮಧ್ಯಮಾವಧಿಯ ಯೋಜನೆ ಅತಿ ಮುಖ್ಯವಾಗಿದ್ದು, ಭಾರತವೂ ಸಹ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಂಡಿರಬೇಕಾಗುತ್ತದೆ ಎಂದು ಸೇನಾ ಹಿರಿಯ ಅಧಿಕಾರಿಗಳು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತದ ಸೀಮಿತ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಹೆಚ್ಚು ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ಕಳಿಸುವ ಸಾಧ್ಯತೆಗಳಿವೆ ಎಂದು ಸೇನಾ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಮತ್ತಷ್ಟು ಭಯೋತ್ಪಾದಕ ಲಾಂಚ್ ಪ್ಯಾಡ್ ಗಳು ನಿರ್ಮಾಣವಾಗುವ ಸಾಧ್ಯತೆ ಇದ್ದು, ನಿರಂತರವಾಗಿ ಆರು ತಿಂಗಳ ಸೇನಾ ಕಾರ್ಯಾಚರಣೆ ನಡೆಸಿದರೆ ಪಾಕ್ ಭಯೋತ್ಪಾದಕ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಬಹುದು ಎಂದು ಸೇನೆ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com