ಮೆರವಣಿಗೆಯಲ್ಲಿ ಫುಲ್ ಪ್ಯಾಂಟ್ ಬಳಸಿ, ಲಾಠಿ ಬೇಡ: ಆರ್‌ಎಸ್‌ಎಸ್‌ಗೆ ಮದ್ರಾಸ್ ಹೈಕೋರ್ಟ್

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌) ಸದಸ್ಯರು ರಾಜ್ಯದಲ್ಲಿ ವಿಜಯದಶಮಿ ಮೆರವಣಿಗೆ ನಡೆಸುವಾಗ ಫುಲ್ ಪ್ಯಾಂಟ್ ಧರಿಸಿ, ಆದರೆ ಕೈಯಲ್ಲಿ ಲಾಠಿ...
ಆರ್‌ಎಸ್‌ಎಸ್‌
ಆರ್‌ಎಸ್‌ಎಸ್‌
ಚೆನ್ನೈ: ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌) ಸದಸ್ಯರು ರಾಜ್ಯದಲ್ಲಿ ವಿಜಯದಶಮಿ ಮೆರವಣಿಗೆ ನಡೆಸುವಾಗ ಫುಲ್ ಪ್ಯಾಂಟ್ ಧರಿಸಿ, ಆದರೆ ಕೈಯಲ್ಲಿ ಲಾಠಿ ಬೇಡ ಎಂದು ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. 
ತಮಿಳುನಾಡಿನಲ್ಲಿ ಈ ತನಕ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳದ ಆರ್‌ಎಸ್‌ಎಸ್‌ ಸಂಘಟನೆ ಈ ಬಾರಿಯ ವಿಜಯದಶಮಿಯಂದು ರಾಜ್ಯದಲ್ಲಿ ಕನಿಷ್ಠ 14 ಕಡೆಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು, ಮೆರವಣಿಗೆಗಳಲ್ಲಿ ತಲಾ 200 ರಿಂದ 300 ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಆರ್‌ಎಸ್‌ಎಸ್‌ ವಿಜಯದಶಮಿ ಮೆರವಣಿಗೆಗೆ ತಮಿಳುನಾಡು ಪೊಲೀಸರು ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಮುಂದೊಡ್ಡಿ ಅಮುಮತಿ ನಿರಾಕರಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಆರ್‌ಎಸ್‌ಎಸ್‌ ಗೆ ಅನುಮತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com