ಸೋನಿಯಾ ಗಾಂಧಿ
ದೇಶ
2 ತಿಂಗಳ ಅನಾರೋಗ್ಯದ ನಂತರ, ಸೋನಿಯಾ- ಲಂಕಾ ಪ್ರಧಾನಿ ಭೇಟಿ
ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಇಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ....
ನವದೆಹಲಿ: ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಇಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಗೆ ಅವರನ್ನ ಭೇಟಿ ಮಾಡಿದ ನಂತರ ಸಾರ್ವಜನಿಕ ಸಭೆ ನಡೆಸಿದರು.
ಆಗಸ್ಟ್ 2 ರಂದು ವಾರಣಾಸಿಯಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಅಸ್ವಸ್ಥರಾಗಿದ್ದ ಸೋನಿಯಾ ಅವರನ್ನು ದೆಹಲಿಯ ಶ್ರೀ ಗಂಗಾರಾಮ್ ಅಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಭುಜಜ ನೋವಿನಿಂದ ನರಳುತ್ತಿದ್ದ ಸೋನಿಯಾಗೆ ಚಿಕಿತ್ಸೆ ನೀಡಲಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಶ್ರೀಲಂಕಾ ಪ್ರಧಾನಿ ಜೊತೆ ಸೋನಿಯಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

