ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಮತ್ತೆ ಆರಂಭ

ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಭಾರೀ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಬುಧವಾರ ಮತ್ತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೊಸೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಭಾರೀ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಬುಧವಾರ ಮತ್ತೆ ಪುನರಾರಂಭಗೊಂಡಿದ್ದು, ಹೊಸೂರು-ಬೆಂಗಳೂರು ರಾಷ್ಟ್ರೀಯ ಹೆದ್ಜಾರಿ 7ರಲ್ಲಿ ವಾಹನ ಓಡಾಟ ಶುರುವಾಗಿದೆ. 29 ದಿನಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಕರ್ನಾಟಕ-ತಮಿಳು ನಾಡು ಗಡಿಯ ಹೊಸೂರು ರಸ್ತೆ ಬಳಿ ಇಂದು ಬೆಳಗ್ಗೆ 10.30ಕ್ಕೆ ಸಂಚಾರ ಆರಂಭಗೊಂಡಿತು. ಈ ಮಾರ್ಗವಾಗಿ ನೂರಾರು ಲಾರಿಗಳು, ಟ್ರಕ್ಕುಗಳು, ಬಸ್ಸುಗಳು, ಖಾಸಗಿ ವಾಹನಗಳು ಓಡಾಡುತ್ತವೆ. ಇದರಿಂದಾಗಿ ಪ್ರಯಾಣಿಕರಿಗೆ ನಿರಾಳತೆ ಸಿಕ್ಕಿದೆ.
ತಮಿಳು ನಾಡು ಕಡೆಯ ಗಡಿಯ ಝುಝವಾಡಿ ಎಂಬಲ್ಲಿ ಕೃಷ್ಣಗಿರಿ ಪೊಲೀಸ್ ಸೂಪರಿಂಟೆಂಡೆಂಟ್ ಮಗೇಶ್ ಕುಮಾರ್ ನೇತೃತ್ವದ 50 ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದರು. ಕರ್ನಾಟಕ ದಾಖಲಾತಿ ಹೊಂದಿರುವ ವಾಹನಗಳು ನಿಧಾನವಾಗಿ ಸಂಚಾರ ಆರಂಭಿಸಿವೆ. ಕರ್ನಾಟಕ ಗಡಿ ಭಾಗದ ಕೊನೆಯ ಅತ್ತಿಬೆಲೆಯಲ್ಲಿ  ಕೂಡ ಅಷ್ಟೇ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದರು.
ಕಾವೇರಿ ಜಲ ವಿವಾದ ಇನ್ನೂ ಬಗೆಹರಿಯದಿರುವ ಸಂದರ್ಭದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಸಣ್ಣ ಪ್ರಾಯೋಗಿಕ ಕ್ರಮ ಕೈಗೊಳ್ಳುತ್ತಿದ್ದಾರೆ. ಕರ್ನಾಟಕ ದಾಖಲಾತಿ ಹೊಂದಿರುವ ವಾಹನಗಳಿಗೆ ರಕ್ಷಣೆ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ವಾಹನಗಳ ಸಂಚಾರ, ದಟ್ಟಣೆ ಗಮನಿಸುತ್ತಿದ್ದೇವೆ ಎಂದು ಎಸ್ ಪಿ ಮಗೇಶ್ ಕುಮಾರ್ ತಿಳಿಸಿದ್ದಾರೆ. 
ಕಾವೇರಿ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿ ಬಸ್ಸು, ಟ್ರಕ್ಕುಗಳು, ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚಿದ್ದರಿಂದ ಹೊಸೂರು-ತಮಿಳು ನಾಡು ಮಧ್ಯೆ ಸೆಪ್ಟೆಂಬರ್ 6ರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಇಷ್ಟು ದಿನ ಬಸ್ಸುಗಳು ಆಯಾ ಗಡಿಯಲ್ಲಿ ನಿಲ್ಲುತ್ತಿದ್ದವು. ಅಲ್ಲಿಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಇನ್ನೊಂದು ಬಸ್ಸು ಹಿಡಿಯಬೇಕಾಗುತ್ತಿತ್ತು. ಟ್ರಕ್ ಗಳಿಗೆ ಕೂಡ ಬೇರೆ ದಾರಿಯಿಲ್ಲದೆ ಗಡಿಯಲ್ಲೇ ನಿಲ್ಲಬೇಕಾಗುತ್ತಿತ್ತು.ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ರೈಲುಗಳ ಮೊರೆ ಹೋಗುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com