ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದು ವಯಕ್ತಿಕ ಕಾರಣಕ್ಕಾಗಿ: ತನಿಖಾ ವರದಿ

ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ವಯಕ್ತಿಕ ಕಾರಣಗಳಿಗಾಗಿ ಎಂದು ತನಿಖಾ ವರದಿ ...
ರೋಹಿತ್ ವೇಮುಲಾ
ರೋಹಿತ್ ವೇಮುಲಾ

ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ವಯಕ್ತಿಕ ಕಾರಣಗಳಿಗಾಗಿ ಎಂದು ತನಿಖಾ ವರದಿ ಮಾಹಿತಿ ಬಹಿರಂಗ ಪಡಿಸಿದೆ.

ಹೈದರಾಬಾದ್ ವಿವಿಯಿಂದ ಆತನನ್ನು ಉಚ್ಚಾಟನೆ ಮಾಡಿದ್ದಕ್ಕಾಗಿ ಆತ ಆತ್ಮಹತ್ಯೆಗೆ ಶರಣಾಗಿಲ್ಲ, ಬದಲಾಗಿ ವಯಕ್ತಿಕ ಸಮಸ್ಯೆಗಳಿಂದಾಗಿ ನೊಂದಿದ್ದ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಆತ್ಮಹತ್ಯೆಯ ಲಾಭ ಪಡೆಯಲು ಆತನನ್ನು ದಲಿತೆನೆಂದು ಬಿಂಬಿಸಲಾಯಿತು. ಅಸಲಿಗೆ ಆತ ದಲಿತನೇ ಅಲ್ಲ ಎಂದು ವರದಿ ಹೇಳಿದೆ.

ರೋಹಿತ್ ವೇಮುಲ ವಿಚಾರದಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ, ಆತನ ಆತ್ಮಹತ್ಯೆಗೂ ವಿಶ್ವ ವಿದ್ಯಾನಿಲಯದಿಂದ ಉಚ್ಛಾಟನೆಯಾಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸಚಿವರಾದ ದತ್ತಾತ್ರೇಯ ಬಂಡಾರು ಮತ್ತು ಸ್ಮೃತಿ ಇರಾನಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆ ಎಂದು  ವರದಿಯಲ್ಲಿ ತಿಳಿಸಲಾಗಿದೆ.

ಪ್ರಕರಣ ಸಂಬಂಧ ಸಮಿತಿ 41 ಪುಟಗಳ ವರದಿಯನ್ನು ಸಲ್ಲಿಸಿದೆ. ರೋಹಿತ್ ತಾಯಿ ರಾಧಾ ತಾವು ದಲಿತರು ಎಂದು ವ್ಯಕ್ತಿಯೊಬ್ಬರಿಂದ ಜಾತಿ ಪ್ರಮಾಣ ಪತ್ರ ಪಡೆದು ಕೊಂಡು ಬಂದಿದ್ದಾರೆ. ಜೊತೆಗೆ ತಮ್ಮ ಪೋಷಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು ಎಂದು ಹೇಳಿದ್ದಾರೆ. ಇದೊಂದು ನಂಬಲಾಗದಂತ ವಿಷಯ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com