ನವದೆಹಲಿ: ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲು) ಅಧ್ಯಕ್ಷೆ ನೇಮಕಾತಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಭ್ರಷ್ಟಾಚಾರ ವಿರೋಧಿ ಶಾಖೆ ಸಮಸ್ಸ್ ಜಾರಿ ಮಾಡಿದೆ.
ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಭ್ರಷ್ಟಾಚಾರ ವಿರೋಧಿ ದಳದ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಮುಕೇಶ್ ಕುಮಾರ್ ಮೀನಾ ಅವರ ಮುಂದೆ ಅಕ್ಟೋಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬರ್ಕಾ ಶುಕ್ಲಾ ಸಿಂಗ್ ಅವರು ದೂರಿನನ್ವಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮತ್ತು ಡಿಸಿಡಬ್ಲು ಮುಖ್ಯಸ್ಥೆ ಸ್ವಾತಿ ಮಲಿವಾಲ್ ವಿರುದ್ಧ ಎಬಿಸಿ ದೂರು ದಾಖಲಿಸಿದ್ದರು.
ಮೋದಿ ಸರ್ಕಾರ ದೆಹಲಿ ಮಹಿಳಾ ಆಯೋಗವನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿದೆ. ಆಯೋಗಕ್ಕೆ ಮರುಜೀವ ನೀಡುವುದಾಗಿ ಹೇಳಿ ಆಮ್ ಆದ್ಮಿ ಪಕ್ಷ(ಎಎಪಿ) ಹೊಸದಾಗಿ ಮುಖ್ಯಸ್ಥರನ್ನು ನೇಮಕ ಮಾಡಿತ್ತು.