ಆಡಳಿತದಲ್ಲಿ ಪಾರದರ್ಶಕತೆ ತರಲು ನಾಗರಿಕ ಸಮಾಜ, ಪತ್ರಕರ್ತರ ಪಾಲ್ಗೊಳ್ಳುವಿಕೆಗೆ ಸಿಬ್ಬಂದಿ ಇಲಾಖೆ ಕ್ರಮ

ಸರ್ಕಾರದ ಕೆಲಸ, ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ತರಲು ಮಾಹಿತಿ ಹಕ್ಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸರ್ಕಾರದ ಕೆಲಸ, ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ತರಲು ಮಾಹಿತಿ ಹಕ್ಕು ಕಾಯ್ದೆಯನ್ನು(ಆರ್ ಟಿಐ) ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರ ನೋಡುತ್ತಿದ್ದು ಈ ಉದ್ದೇಶಕ್ಕಾಗಿ ನಾಗರಿಕ ಸಮಾಜ ಮತ್ತು ಪತ್ರಕರ್ತರ ಗುಂಪಿನಿಂದ ಪ್ರತಿನಿಧಿಗಳ ಸಹಾಯವನ್ನು ಪಡೆಯಲಾಗುತ್ತಿದೆ.
ಸರ್ಕಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮೂಲಕ ಮಾಧ್ಯಮ, ಪತ್ರಕರ್ತರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಮೂಲಕ ಅಲ್ಪಾವಧಿಯ ಫೆಲೋಶಿಪ್ ನೀಡಲು ನಿರ್ಧರಿಸಿದೆ. ಮಾಹಿತಿ ಹಕ್ಕು ಕಾಯ್ದೆಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೋಡಲ್ ಸಂಸ್ಥೆಯಾಗಿದೆ.
ಮೂಲಗಳ ಪ್ರಕಾರ, ಆರ್ ಟಿಐ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಯತ್ನ ನಡೆಸಲಾಗುತ್ತದೆ. ಕಾಯ್ದೆಯ ಪ್ರಮುಖ ಉದ್ದೇಶ ಸರ್ಕಾರದ ಆಡಳಿತ, ಕಾರ್ಯಕ್ರಮಗಳಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ನಿಖರತೆ ತರುವುದು, ಸರ್ಕಾರದ ಅನೇಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು, ತರಬೇತಿ, ಇ-ಆಡಳಿತದ ಉದ್ದೇಶಗಳನ್ನು ಈಡೇರಿಸುವುದಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com