ಮೇ 2017ರೊಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ: ಪಿಯೂಷ್ ಗೋಯಲ್

ಮೇ 2017ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಎನ್ ಡಿಎ ಸರ್ಕಾರ...
ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್ (ಸಂಗ್ರಹ ಚಿತ್ರ)
ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್ (ಸಂಗ್ರಹ ಚಿತ್ರ)
ವಡೋದರ(ಗುಜರಾತ್): ಮೇ 2017ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಎನ್ ಡಿಎ ಸರ್ಕಾರ ನಿಗದಿಪಡಿಸಿದ್ದ ಸಾವಿರ ದಿನಗಳಿಗಿಂತಲೂ ಮೊದಲೇ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರಕಲಿದೆ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಇಂಧನ, ಹೊಸ ಮತ್ತು ನವೀಕರಣ ಇಂಧನ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗಣಿ ಸಚಿವರ ಎರಡು ದಿನಗಳ ಸಮ್ಮೇಳನದ ಕೊನೆಯ ದಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯಗಳಿಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಮಳೆಯ ಕಾರಣದಿಂದಾಗಿ ಗ್ರಾಮಗಳಿಗೆ ವಿದ್ಯುದೀಕರಣದ ಸಮಸ್ಯೆ ಕಳೆದ ಕೆಲವು ತಿಂಗಳಲ್ಲಿ ನಿಧಾನವಾಗಿತ್ತು. ಸಮ್ಮೇಳನದ ಎರಡು ದಿನಗಳಲ್ಲಿ ರಾಜ್ಯಗಳ ಇಂಧನ ಸಚಿವರ ಜೊತೆ ಮಾತನಾಡಿದ ಪ್ರಕಾರ ಮುಂದಿನ ವರ್ಷ ಮೇಯೊಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವ ವಿಶ್ವಾಸವಿದೆ. ಇದಕ್ಕೆ ಅಗತ್ಯವಿದ್ದರೆ ರಾಜ್ಯಗಳಿಗೆ ಸಾಲವನ್ನು ಕೂಡ ನೀಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com