ಸಮಾಜವಾದಿ ಪಕ್ಷದ ಹೋರ್ಡಿಂಗ್
ದೇಶ
ಮೋದಿಗೆ ಸರ್ಜಿಕಲ್ ದಾಳಿ ನಡೆಸಲು ಸಲಹೆ ನೀಡಿದ್ದು ಮುಲಾಯಂ ಸಿಂಗ್ ಯಾದವ್ !
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಸಲಹೆ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ನಡೆಸಲು ....
ಮೀರತ್: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಸಲಹೆ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ನಡೆಸಲು ಆದೇಶಿಸಿದರು ಎಂಬ ಹೋರ್ಡಿಂಗ್ ಅನ್ನು ಉತ್ತರ ಪ್ರದೇಶದಲ್ಲಿ ಹಾಕಲಾಗಿದೆ
ಮುಜಫರ್ನಗರದ ಸಮಾಜವಾದಿ ಯುವ ಸಭಾದ ನಾಯಕ ಮೊಹಮ್ಮದ್ ಶಮೀರ್ ಮಲಿಕ್ ಎಂಬಾತ ಹೋರ್ಡಿಂಗ್ ಮಾಡಿಸಿ ಹಾಕಿದ್ದಾನೆ. ಇದರಲ್ಲಿ ಮುಲಾಯಂ ಸಿಂಗ್ ಮತ್ತು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಅವರ ಫೋಟೋ ಹಾಕಿದ್ದು, ಭಾರತೀಯ ಸೇನೆಗೆ ಧನ್ಯವಾದ ಅರ್ಪಿಸಲಾಗಿದೆ.
ಜತೆಗೆ ಮುಲಾಯಂ ಸಿಂಗ್ ಅವರ ಸಲಹೆ ಪಡೆದ ನಂತರವಷ್ಟೇ ಮೋದಿ ಸೀಮಿತ ದಾಳಿ ನಡೆಸಲು ಅನುಮತಿ ನೀಡಿದ್ದರು ಎಂದು ಬರೆಯಲಾಗಿದೆ. ನೇತಾಜಿ (ಮುಲಾಯಂ) ಈ ಹಿಂದೆ ರಕ್ಷಣಾ ಸಚಿವರಾಗಿದ್ದರು. ಹಾಗಾಗಿ ಅವರಿಗೆ ಗಡಿಯಲ್ಲಿ ಉಗ್ರರ ಚಟುವಟಿಕೆಗಳು ಮತ್ತು ಸೇನೆಯ ಕುರಿತು ಸಾಕಷ್ಟು ಮಾಹಿತಿ ಗೊತ್ತಿದೆ ಎಂದು ಮಾದ್ಯಗಳಿಗೆ ಆತ ತಿಳಿಸಿದ್ದಾಗಿ ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ