ದಸರಾ ಪ್ರಯುಕ್ತ ರಾವಣನ ಅವತಾರದಲ್ಲಿ ಪಾಕ್ ಪಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿ ಸಂಭ್ರಮ

ಭಾರತ ಮತ್ತು ಪಾಕ್ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಅಮೃತಸರ ನಿವಾಸಿಗಳು ಈ ಬಾರಿ ದಸರಾವನ್ನು ವಿಶೇಷವಾಗಿ ಆಚರಿಸಲು ...
ನವಾಜ್ ಶರೀಫ್ ಪ್ರತಿಕೃತಿ
ನವಾಜ್ ಶರೀಫ್ ಪ್ರತಿಕೃತಿ

ಅಮೃತಸರ: ಭಾರತ ಮತ್ತು ಪಾಕ್ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಅಮೃತಸರ ನಿವಾಸಿಗಳು ಈ ಬಾರಿ ದಸರಾವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಗಡಿಯಲ್ಲಿ ಪಾಕ್‌ ಭಯೋತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೃತ್‌ಸರ್‌ ಜನತೆ ಪಾಕ್‌ ಧ್ವಜದಲ್ಲಿ ರಾವಣನ ಪ್ರತಿಕೃತಿ ತಯಾರಿಸಿದ್ದಾರೆ. ರಾವಣನ ಮುಖವಾಡಕ್ಕೆ ಪಾಕ್‌‌ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಉಗ್ರ ಹಫೀಜ್‌ ಸಯೀದ್‌ ಫೋಟೋಗಳನ್ನು ಅಂಟಿಸಿದ್ದಾರೆ. ಅದಕ್ಕೆ ಬೆಂಕಿ ಹಚ್ಚಲು ಅಣಿಯಾಗಿದ್ದಾರೆ. ರಾವಣ, ಮೇಘನಾದ, ಕುಂಭಕರ್ಣರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ.

ಇನ್ನು, ಈ ಪ್ರತಿಕೃತಿಯನ್ನು ಗಡಿಯಲ್ಲಿನ ಭಯೋತ್ಪಾದನೆ ಖಂಡಿಸಲು ಸಿದ್ಧಪಡಿಸಿದ್ದು, ಭಾರತ ಉಗ್ರರ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com