ಆದಿ ಗೊದ್ರೇಜ್ ಪತ್ನಿ ಪರ್ಮೇಶ್ವರ್ ಗೊದ್ರೇಜ್ ವಿಧಿವಶ

ಆದಿ ಗೊದ್ರೇಜ್ ಪತ್ನಿ ಪರ್ಮೇಶ್ವರ್ ಗೊದ್ರೇಜ್ ಸೋಮವಾರ ರಾತ್ರಿ ನಿಧನರಾಗಿದ್ದಾರೆ...
ಪರ್ಮೇಶ್ವರ್ ಗೊದ್ರೇಜ್
ಪರ್ಮೇಶ್ವರ್ ಗೊದ್ರೇಜ್
Updated on: 

ನವದೆಹಲಿ: ಆದಿ ಗೊದ್ರೇಜ್ ಪತ್ನಿ ಪರ್ಮೇಶ್ವರ್ ಗೊದ್ರೇಜ್ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

70 ವರ್ಷದ ಪರ್ಮೇಶ್ವರ್ ಗೊದ್ರೇಜ್, ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದಾಗಿ ಕೆಲದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಸೋಮವಾರ ರಾತ್ರಿ ಪರ್ಮೇಶ್ವರ್ ಗೊದ್ರೇಜ್ ಮುಂಬಯಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪಾಕಿಸ್ತಾನ ವಿರೋಧ ಪಕ್ಷದ ನಾಯಕ ಹಾಗೂ ಪಾಕಿಸ್ತಾನ ತೆಹ್ರೀಕ್ -ಇ- ಇನ್ಸಾಫ್ ಅಧ್ಯಕ್ಷ ಇರ್ಮಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ್ದಳು ಎಂದು ಟ್ವೀಟ್ ಮಾಡಿದ್ದಾರೆ.

ಆದಿ ಗೊದ್ರೇಜ್ ಅವರನ್ನು ವಿವಾಹವಾಗುವ ಮುನ್ನ ಈಕೆ ಏರ್ ಇಂಡಿಯಾದ  ಪ್ರಪ್ರಥಮ ಗಗನ ಸಖಿಯಾಗಿ ಕೆಲಸ ನಿರ್ವಹಿಸಿದ್ದರು. ಪರ್ಮೇಶ್ವರ್ ಗೊದ್ರೇಜ್ ಮೂವರು ಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com