ನರೇಂದ್ರ ಮೋದಿ
ದೇಶ
ಪ್ರಧಾನಿಯಾದ ಬಳಿಕ ಒಂದು ದಿನವೂ ರಜೆ ತೆಗೆದುಕೊಳ್ಳದ ನರೇಂದ್ರ ಮೋದಿ
ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಒಂದು ದಿನವೂ ರಜೆಯನ್ನೇ ಪಡೆದಿಲ್ಲವಂತೆ. ಇದನ್ನು ಸ್ವತಃ ಪ್ರಧಾನಮಂತ್ರಿಗಳ ...
ನವದೆಹಲಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಒಂದು ದಿನವೂ ರಜೆಯನ್ನೇ ಪಡೆದಿಲ್ಲವಂತೆ. ಇದನ್ನು ಸ್ವತಃ ಪ್ರಧಾನಮಂತ್ರಿಗಳ ಕಾರ್ಯಾಲಯವೇ ಸ್ಪಷ್ಟಪಡಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿ ಹಾಗೂ ಸಂಪುಟ ಕಾರ್ಯದರ್ಶಿಗಳ ರಜೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ ಉತ್ತರಿಸಿದೆ. ಪ್ರಧಾನಮಂತ್ರಿಗಳು ಎಲ್ಲಾ ಸಮಯದಲ್ಲೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ' ಎಂದು ಪ್ರಧಾನಿ ಕಾರ್ಯಾಲಯ ಆರ್‌ಟಿಐ ಮೂಲಕ ಹೇಳಿದೆ.
ಹಿಂದಿನ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಹೆಚ್.ಡಿ.ದೇವೇಗೌಡ, ಐ.ಕೆ. ಗುಜ್‌ರಾಲ್, ವಿ.ಪಿ.ನರಸಿಂಹರಾವ್, ಚಂದ್ರಶೇಖರ್, ಪಿ.ವಿ.ಸಿಂಗ್ ಹಾಗೂ ರಾಜೀವ್ ಗಾಂಧಿ ಅವರ ರಜೆಗಳ ಬಗ್ಗೆ ಕೂಡ ಮಾಹಿತಿ ನೀಡುವಂತೆ ಆರ್‌ಟಿಐ ಕಾರ್ಯಕರ್ತರು ಕೇಳಿದ್ದರು. ಇದಕ್ಕೆ 'ಹಿಂದಿನ ಪ್ರಧಾನಿಗಳ ರಜೆ ಕುರಿತ ಮಾಹಿತಿಯ ದಾಖಲೆಗಳು ಈ ಕಚೇರಿಯಲ್ಲಿ ಇಲ್ಲ' ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ