ಜಮ್ಮುವಿಗೆ ಐಐಎಂ ಘೋಷಿಸಿದ ಕೇಂದ್ರ ಸರ್ಕಾರ

ಕೇಂದ್ರ ಸಚಿವ ಸಂಪುಟ ಅ.13 ರಂದು ಜಮ್ಮುವಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ) ನ್ನು ಘೋಷಿಸಿದೆ.
ಜಮ್ಮುವಿಗೆ ಐಐಎಂ ಘೋಷಿಸಿದ ಕೇಂದ್ರ ಸರ್ಕಾರ
ಜಮ್ಮುವಿಗೆ ಐಐಎಂ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸಚಿವ ಸಂಪುಟ ಅ.13 ರಂದು ಜಮ್ಮುವಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ) ನ್ನು ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ 62 ಕೋಟಿ ರು ವೆಚ್ಚದಲ್ಲಿ ಜಮ್ಮುವಿನಲ್ಲಿ ಐಐಎಂ ಪ್ರಾರಂಭಿಸಲು ಹಸಿರು ನಿಶಾನೆ ತೋರಿದೆ. 2016 ರಿಂದ 2020 ರ ವರೆಗೆ  ಜಮ್ಮು ಐಐಎಂ ಜಮ್ಮುವಿನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ಕಟ್ಟಡದಲ್ಲಿ ಐಐಎಂ ತರಗತಿಗಳು ನಡೆಯಲಿವೆ. ನಂತರ ಜಮ್ಮುವಿನಲ್ಲಿ ನಿರ್ಮಾಣವಾಗಲಿರುವ ಪ್ರತ್ಯೇಕ ಕ್ಯಾಂಪಸ್ ನಲ್ಲಿ ಐಐಎಂ ಕಾರ್ಯನಿರ್ವಹಿಸಲಿವೆ.

ಅಧಿಕೃತ ಪ್ರಕಟಣೆಯ ಪ್ರಕಾರ 2016-17 ನೇ ಸಾಲಿನಲ್ಲಿ ಮ್ಯಾನೇಜ್ ಮೆಂಟ್ ವಿಭಾಗದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಗೆ 54 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದ್ದು, 4 ನೇ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 120 ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಐಐಎಂ ಗಾಗಿ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣಕ್ಕಾಗಿ ಯೋಜನಾ ವರದಿ ತಯಾರಿಸಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ಯೋಜನಾ ವರದಿ ಸಿದ್ಧವಾದ ನಂತರ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. ಐಐಎಂ ಪ್ರಾರಂಭಕ್ಕೆ ಜಮ್ಮು ಸೊಸೈಟಿ ರೆಪ್ರೆಸೆಂಟೇಷನ್ ಕಾಯ್ದೆ 1860 ರ ಅಡಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಜಮ್ಮು ಐಐಎಂ ನ ನಿರ್ವಹಣೆಗಾಗಿ ಅಧ್ಯಕ್ಷೀಯ ಮಂಡಳಿಯನ್ನೊಳಗೊಂಡ ಸೊಸೈಟಿಯೊಂದನ್ನು ಪ್ರಾರಂಭಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ನೀಡುವ ಅಭಿವೃದ್ಧಿ ಪ್ಯಾಕೇಜ್ ಅಡಿ ಐಐಎಂ ಪ್ರಾರಂಭವಾಗಲಿದ್ದು ಇದು ದೇಶದ 20 ನೇ ಐಐಎಂ ಆಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com