ಈ ಕುರಿತು ರಕ್ಷಣಾ ಸಚಿವಾಲಯ ಮೊನ್ನೆ 10ನೇ ತಾರೀಖಿನಂದು ಹೊರಡಿಸಿದ ಆದೇಶದ ಪ್ರತಿ ಸಿಕ್ಕಿದೆ. 7ನೇ ವೇತನ ಆಯೋಗದ ಅಧಿಸೂಚನೆಯಂತೆ ಬಾಕಿ ನೀಡಿಕೆಯಂತೆ ತಾತ್ಕಾಲಿಕ ಆಧಾರದ ಮೇಲೆ ಬಾಕಿ ವೇತನ ನೀಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಯೋಧರು ಈಗ ಪಡೆಯುತ್ತಿರುವ ವೇತನದ ಶೇಕಡಾ 10ರಷ್ಟು ಹೆಚ್ಚು ಪಡೆಯಲಿದ್ದಾರೆ. ಇದು ಈ ವರ್ಷ ಜನವರಿಯಿಂದ ಪೂರ್ವಾನ್ವಯವಾಗಲಿದೆ.