ಒತ್ತಡಕ್ಕೆ ಸಿಲುಕಿದ ಪಾಕ್: ಪತ್ರಕರ್ತ ಸಿರಿಲ್ ಅಲ್ಮೈದಾಗೆ ವಿಧಿಸಿದ್ದ "ದಿಗ್ಭಂಧನ" ಹಿಂಪಡೆಯುವ ಸೂಚನೆ

ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ" ವಿಧಿಸಿದ್ದಕ್ಕೆ ತೀವ್ರ ಟೀಕೆ ಎದುರಿಸಿದ್ದ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡಂತಿದೆ.
ಒತ್ತಡಕ್ಕೆ ಸಿಲುಕಿದ ಪಾಕ್: ಪತ್ರಕರ್ತ ಸಿರಿಲ್ ಅಲ್ಮೈದಾಗೆ ವಿಧಿಸಿದ್ದ "ದಿಗ್ಭಂಧನ" ಹಿಂಪಡೆಯುವ ಸೂಚನೆ
ಒತ್ತಡಕ್ಕೆ ಸಿಲುಕಿದ ಪಾಕ್: ಪತ್ರಕರ್ತ ಸಿರಿಲ್ ಅಲ್ಮೈದಾಗೆ ವಿಧಿಸಿದ್ದ "ದಿಗ್ಭಂಧನ" ಹಿಂಪಡೆಯುವ ಸೂಚನೆ

ನವದೆಹಲಿ: ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ" ವಿಧಿಸಿದ್ದಕ್ಕೆ ತೀವ್ರ ಟೀಕೆ ಎದುರಿಸಿದ್ದ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡಂತಿದ್ದು, ಪತ್ರಕರ್ತನ ವಿರುದ್ಧ ಜರುಗಿಸಲಾಗಿದ್ದ ಕ್ರಮವನ್ನು ಹಿಂಪಡೆಯುವ ಸೂಚನೆ ನೀಡಿದೆ.

ಪಾಕಿಸ್ತಾನದ ಆಂತರಿಕ ಸಚಿವ ಚೌದರಿ ನಿಸಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ದಿಗ್ಬಂಧನ ವಿಧಿಸುವ ಪಟ್ಟಿಯಲ್ಲಿ ಡಾನ್ ಪತ್ರಿಕೆಯ ಪತ್ರಕರ್ತ, ಅಂಕಣಕಾರ ಸಿರಿಲ್ ಅಲ್ಮೈದಾ ಹೆಸರು ಹೇಗೆ ಬಂತೆಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

3-4 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದ್ದು ತನಿಖೆ ಪೂರ್ಣಗೊಂಡ ನಂತರ ದಿಗ್ಬಂಧನದ ಆದೇಶವನ್ನು ವಾಪಸ್ ಪಡೆಯಲಾಗುವುದೆಂದು ಸಚಿವರು ಹೇಳಿದ್ದಾರೆ. ಪತ್ರಕರ್ತನಿಗೆ ದಿಗ್ಬಂಧನ ವಿಧಿಸಲಾಗಿರುವ ವರದಿಯನ್ನು ಭಾರತದ ಮಾಧ್ಯಮಗಳು ಪಾಕಿಸ್ತಾನ ತನ್ನ ನೆಲದವರಲ್ಲದ ಭಯೋತ್ಪಾದಕರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಳಸಿಕೊಂಡಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com