ಬಾಲಿವುಡ್ ಸ್ಟೈಲ್ ನಲ್ಲಿ ತಂದೆಯನ್ನೇ ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಮಗನ ಬಂಧನ

ಬಾಲಿವುಡ್ ಸಿನಿಮಾ ಶೈಲಿಯಲ್ಲಿ ತಂದೆಯನ್ನೇ ಅಪಹರಿಸಿ 7 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಭುವನೇಶ್ವರ್: ಬಾಲಿವುಡ್ ಸಿನಿಮಾ ಶೈಲಿಯಲ್ಲಿ ತಂದೆಯನ್ನೇ ಅಪಹರಿಸಿ  7 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಭುನವೇಶ್ವರದ ತಂಗಾದುವನ್ ಗ್ರಾಮದ ಬೆಟನಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಅಬಾನಿ ಬೆಹೇರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 10 ರಂದು ತನ್ನ ತಂದೆಬಾಗ್ ಬಾಟಾ ಚಂದ್ರ ಬೆಹೇರಾ ಮನೆಗೆ ಬಂದಿಲ್ಲ ಎಂದು ದೂರು ದಾಖಲಿಸಿದ್ದ.  ಜೊತೆಗೆ ತಂಡವೊಂದು ತನ್ನ ತಂದೆಯನ್ನು ಅಪಹರಿಸಿ 7ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ತನ್ನ ತಂದೆಯನ್ನು ಬಿಡುಗಡೆ ಮಾಡಬೇಕಾದರೇ ಹಣ ನೀಡುವಂತೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ತನ್ನ ತದಂಯೆ ಮೊಬೈಲ್ ನಂಬರ್ ಕೊಟ್ಟು ಬಂದಿದ್ದ.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಪಹರಣಗೊಂಡವನ ಮೊಬೈಲ್ ನಂಬರ್ ಇದ್ದ ಸ್ಥಳ ಪತ್ತೆ ಹಚ್ಚಿದ್ದಾರೆ. ಅಪಹರಿಸಿದಾತ ತನ್ನ ತಂದೆ ಜೊತೆ ವಿವಿಧ ಸ್ಥಳಗಳಿಗೆ ತೆರಳಿದ್ದಿದ್ದು ಪತ್ತೆಯಾಗಿದೆ.

ನಿವೃತ್ತ ಶಿಕ್ಷಕರಾಗಿದ್ದ ತಂದೆಯ ಎಟಿಎಂನಿಂದ ಮಗ ಹಣ ಡ್ರಾ ಮಾಡಿದ್ದ. ಇದನ್ನು ಹಿಂಬಾಲಿಸಿದ  ಪೊಲೀಸರು ತಂದೆಯ ಅಕೌಂಟ್ ಬ್ಲಾಕ್ ಮಾಡಿಸಿದ್ದರು. ಜೊತೆಗೆ ತನ್ನ ತಂದೆಯಿಂದ 80 ಸಾವಿರ ರೂ ಚೆಕ್ ಅನ್ನು ಪಡೆದುಕೊಂಡಿದ್ದ ಆತ, ಹಣವನ್ನು ಡ್ರಾ ಮಾಡಲು ಬ್ಯಾಂಕ್ ಬಳಿ ತಂದೆಯ ಜೊತೆ ಬಂದಿದ್ದ. ಆದರೆ ಅಕೌಂಟ್ ಬ್ಲಾಕ್ ಮಾಡಿದ್ದ ಕಾರಣ ಹಣ ಡ್ರಾ ಮಾಡಲು ಆಗದೇ ವಾಪಸ್ ತೆರಳಿದ್ದ. ಇದಾದ ನಂತರ ಅಲ್ಲಿಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಅದರಲ್ಲಿರುವುದು ತಮಗೆ ದೂರು ನೀಡಿದ್ದ ಮಗನೇ ಎಂದು ತಿಳಿದು ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com