ಕಾಲ್ಪನಿಕವಲ್ಲ! ಸರಸ್ವತಿ ನದಿ ವಾಸ್ತವವಾಗಿ ಅಸ್ತಿತ್ವದಲ್ಲಿತ್ತು: ತಜ್ಞರ ವರದಿ

ಸರಸ್ವತಿ ನದಿ ಕಾಲ್ಪನಿಕವಲ್ಲ, ನಿಜವಾಗಿಯೂ ಅದು ವಾಸ್ತವವಾಗಿ ಅಸ್ತಿತ್ವದಲ್ಲಿತ್ತು ಎಂದು ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ವರದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸರಸ್ವತಿ ನದಿ ಕಾಲ್ಪನಿಕವಲ್ಲ, ನಿಜವಾಗಿಯೂ ಅದು ವಾಸ್ತವವಾಗಿ ಅಸ್ತಿತ್ವದಲ್ಲಿತ್ತು ಎಂದು  ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ವರದಿ ತಿಳಿಸಿದೆ.

ಹಿಮಾಲಯದಲ್ಲಿ ಮೂಲ ಹೊಂದಿದ್ದ ನದಿ ಕೊಲ್ಲಿಯಲ್ಲಿ ಪಶ್ಚಿಮದ ಸಮುದ್ರ ಸೇರುತ್ತಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಸಮಿತಿ ನೇತೃತ್ವ ಹೊಂದಿತ್ತು. ಹರಿಯಾಣ, ರಾಜಸ್ತಾನ ಹಾಗೂ ಉತ್ತರ ಗುಜರಾತ್‌ನಲ್ಲಿ  ನದಿ ಹರಿಯುತ್ತಿತ್ತು ಎಂದು ಹಿರಿಯ ಭೂಗೋಳಶಾಸ್ತ್ರಜ್ಞರೂ ಆಗಿರುವ ವಾಲ್ದಿಯಾ ಹೇಳಿದ್ದಾರೆ.

ನದಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಕವಲು ಹೊಂದಿತ್ತು. ಹಿಮಾಲಯದಲ್ಲಿ ಹುಟ್ಟುತ್ತಿದ್ದ ಸಟ್ಲೆಜ್‌ ನದಿ ಪ್ರಸ್ತುತ ಘಗ್ಗರ್‌–ಪಟಿಯಾಲಿವಾಲಿ ಕಾಲುವೆ ಮಾರ್ಗದಲ್ಲಿ ಹರಿಯುತ್ತಿತ್ತು. ಇದು ಪುರಾತನ ಕಾಲದ ಸರಸ್ವತಿ ನದಿಯ ಪಶ್ಚಿಮ ಕವಲಾಗಿತ್ತು. ಸರಸ್ವತಿ ನದಿಯ ಪೂರ್ವ ಕವಲು  ಮಾರ್ಕಂಡ ಹಾಗೂ ಸರ್ಸುತಿ (ಸರಸ್ವತಿಯ ಅಪಭ್ರಂಶ) ನದಿಯಾಗಿತ್ತು ಎಂದು ಏಳು ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿದೆ.

ನದಿ ತನ್ನ ಪಥ ಬದಲಿಸಿದ ವಿಶಿಷ್ಟ ಕುರುಹು ಪತ್ತೆಯಾಗಿದ್ದು, ಇದು ಈಗ ಇರುವ ಘಗ್ಗರ್‌, ಸರ್ಸುತಿ , ಹಕ್ರಾ ಹಾಗೂ ನಾರಾ ನದಿಗಳ ಮಾರ್ಗಕ್ಕೆ ಸಂಬಂಧಿಸಿದ್ದು ಎಂದು ವಾಲ್ದಿಯಾ ಅವರು ವಿವರಿಸಿದ್ದಾರೆ. ಸರಸ್ವತಿ ನದಿ ಅಸ್ತಿತ್ವ ಕುರಿತು ಸಮಿತಿ ಆರು ತಿಂಗಳ ಕಾಲ ಸಂಶೋಧನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com