ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ನಿರ್ಧಾರ: ದುಬಾರಿಯಾಗಲಿರುವ ಚಹಾ

ನಮ್ಮ ದೇಶದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ದ್ರವಾಹಾರ ಚಹಾ. ಟೀ ಬೆಳೆಯುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಚ್ಚಿ: ನಮ್ಮ ದೇಶದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ದ್ರವಾಹಾರ ಚಹಾ. ಟೀ ಬೆಳೆಯುವ ರಾಜ್ಯಗಳಲ್ಲಿ ತೋಟದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲು ಅಲ್ಲಿನ ಸರ್ಕಾರಗಳು ಸಿದ್ಧವಾಗಿರುವ ಸಂದರ್ಭದಲ್ಲಿ ಚಹಾದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಚಹಾದ ಬೆಲೆ ಹಾಲು, ಸಕ್ಕರೆಯ ಬೆಲೆಗೆ ಸಂಬಂಧ ಹೊಂದಿದ್ದರೂ ಕೂಡ ಚಹಾ ತೋಟದ ಕಾರ್ಮಿಕರ ಸಮಸ್ಯೆ ಚಹಾ ಬೆಲೆ ಹೆಚ್ಚಾಗಲು ಕಾರಣವಾಗಬಹುದು. ತಜ್ಞರ ಪ್ರಕಾರ ಚಹಾ ಬೆಲೆ ಪ್ರತಿ ಈಗಿರುವ 8ರಿಂದ 15 ರೂಪಾಯಿ ಬದಲಿಗೆ 18ರಿಂದ 20 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕಾರಣಗಳು: ಯಾವಾಗ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆಯೋ ಆಗ ಕಾರ್ಮಿಕರ ವೇತನ ಕೂಡ ಜಾಸ್ತಿಯಾಗಬೇಕು. ಬಂಡವಾಳ ಹೆಚ್ಚಳವನ್ನು ಕಂಪೆ ನಿಗಳು ಗ್ರಾಹಕರ ಮೇಲೆ ಹಾಕುತ್ತವೆ. ಅಸ್ಸಾಂನಲ್ಲಿ ಟೀ ತೋಟದಲ್ಲಿ ಕೆಲಸ ಮಾಡುವ ಕೂಲಿಕಾರರ ವೇತನ ದಿನಕ್ಕೆ 126 ರೂಪಾಯಿ. ಅದನ್ನು ದಿನಕ್ಕೆ ಕನಿಷ್ಠ ವೇತನ 250 ರೂಪಾಯಿಗೆ ನಿಗದಿಪಡಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಉತ್ಪಾದನೆ ವೆಚ್ಚ ಜಾಸ್ತಿಯಾಗುತ್ತಿದೆ.ಆಗ ಸಹಜವಾಗಿ ಚಹಾ ಪುಡಿ ಬೆಲೆ ದುಬಾರಿಯಾಗುತ್ತದೆ.
ದೇಶದ ಚಹಾ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಉತ್ಪಾದಿಸುವ ದಕ್ಷಿಣ ಭಾರತದಲ್ಲಿ ಅದೇ ಪರಿಸ್ಥಿತಿ. ತಮಿಳುನಾಡಿನಲ್ಲಿ ಚಹಾ ತೋಟದ ಕಾರ್ಮಿಕರ ವೇತನವನ್ನು ಕನಿಷ್ಠ ಮೂಲ ವೇತನ 223 ರೂಪಾಯಿ ನಿಗದಿಗೊಳಿಸಲಿದ್ದು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.
ಕಳೆದ ವರ್ಷ ಸೆಪ್ಟೆಂಬರ್ ವರೆಗೆ ಅಸ್ಸಾಂನಲ್ಲಿ ಚಹಾದ ಬೆಲೆ ಕೆಜಿಗೆ 110ರೂಪಾಯಿಯಿಂದ 148 ರೂಪಾಯಿ. ದಕ್ಷಿಣ ಭಾರತದಲ್ಲಿ 62ರಿಂದ 71 ರೂಪಾಯಿ, ಪಶ್ಚಿಮ ಬಂಗಾಲದಲ್ಲಿ 65ರಿಂದ 81 ರೂಪಾಯಿಯಿದೆ. ಈ ವರ್ಷ ಸೆಪ್ಟೆಂಬರ್ ವರೆಗೆ ಚಹಾ ಬೆಲೆ ಸೆಪ್ಟೆಂಬರ್ ನಲ್ಲಿ 117 ರೂಪಾಯಿಯಿಂದ 136 ರೂಪಾಯಿ, ದಕ್ಷಿಣ ಭಾರತದಲ್ಲಿ 84ರಿಂದ 97 ರೂಪಾಯಿ ಮತ್ತು ಪಶ್ಚಿಮ ಬಂಗಾಲದಲ್ಲಿ 99ರಿಂದ 106 ರೂಪಾಯಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com