ಉರಿ ಅಟ್ಯಾಕ್: ಭಾರತ ಗಡಿಯ ವಿದ್ಯುತ್ ಬೇಲಿ ದಾಟಲು ಉಗ್ರರು ಮಾಡಿದ ಉಪಾಯವೇನು ಗೊತ್ತೆ?

ಸೆಪ್ಬಂಬರ್ 18 ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆ ಯಲ್ಲಿನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಸೆಪ್ಬಂಬರ್ 18 ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆ ಯಲ್ಲಿನ ವಿದ್ಯುತ್ ಬೇಲಿ ದಾಟಲು ಏಣಿ ಬಳಸಿ, ದೇಶಕ್ಕೆ ನುಸುಳಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಉಗ್ರರು ಯಾವ ದಾರಿಯ ಮೂಲಕ ದೇಶದೊಳಕ್ಕೆ ನುಸುಳಿದ್ದಾರೆ ಎಂಬ ಬಗ್ಗೆ ಸೇನೆ ತನಿಖೆ ಆರಂಭಿಸಿದೆ. ಸಲಾಮಾಬಾದ್ ನಾಲೆಯ ಸಮೀಪ ಉಗ್ರರು ನುಸುಳಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಭಯೋತ್ಪಾದಕರಲ್ಲಿ ಓರ್ವ ಉಗ್ರ ಸಲಾಮಾಬಾದ್‌‌ ಎಂಬ ಗಡಿ ಪ್ರದೇಶದಲ್ಲಿದ್ದ ಸಣ್ಣ ಜಾಗದಿಂದ ಭಾರತದ ಗಡಿ ಪ್ರದೇಶದೊಳಗೆ ನುಗ್ಗಿದ್ದಾನೆ. ನಂತರ ಪಾಕ್ ಆಕ್ರಮಿತ ಕಾಶ್ಮೀರದ ಕಡೆಯಿಂದ ಮೂವರು ಉಗ್ರರು ಏಣಿಯ ಸಹಾಯದಿಂದ ಗಡಿ ದಾಟಿ ಭಾರತದೊಳಗೆ ನುಸುಳಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ.

ಅವರು ಗಡಿ ದಾಡುವುದಕ್ಕೂ ಮೊದಲು ಉರಿ ಸೇನಾ ನೆಲೆಯ ಕುರಿತು ಬಹಳಷ್ಟು ಮಾಹಿತಿ ಪಡೆದುಕೊಂಡಿದ್ದರು. ಅದರ ಪ್ರಕಾರ ಅವರು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಏಣಿ ಬಳಸಿ ಒಳ ಬಂದಿದ್ದಾರೆ ಎಂಬ ಸುಳಿವು ಸಿಗಬಾರದು ಎನ್ನುವ ಕಾರಣದಿಂದ ಏಣಿಯನ್ನು ಜೊತೆಗೆ ಕೊಂಡೊಯ್ದಿದ್ದಾರೆ.

ಘಟನೆ ಬಗ್ಗೆ ಸೇನೆಯು ಆಂತರಿಕ ತನಿಖೆಯನ್ನು ಆರಂಭಿಸಿದೆ. ಉರಿ ಶಿಬಿರದ ಬ್ರಿಗೇಡ್ ಕಮಾಂಡರ್ ಸೋಮಾ ಶೇಖರ್  ಅವರನ್ನು ವರ್ಗಾವಣೆ ಮಾಡಲಾಗಿದೆ.

ಉಗ್ಗರು ಏಣಿಯ ಮೂಲಕ ಗಡಿ ನುಸುಳಿರುವುದು ಇದೇ ಮೊದಲಲ್ಲ. ಈ ವರ್ಷದ ಆರಕಂಭದಲ್ಲಿ ಉತ್ತರ ಕಾಶ್ಮೀರದ ಮುಚಿಲ್ ವಲಯದಲ್ಲಿ ಉಗ್ರರು ಏಣಿಯ ಮೂಲಕ ಒಳ ನುಸುಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com