ಪಾಟ್ನಾ ರೈಲು ನಿಲ್ದಾಣದಲ್ಲಿ ಅತಿ ಹೆಚ್ಚು ವೈಫೈ ಬಳಕೆ, ಅಶ್ಲೀಲ ತಾಣಕ್ಕಾಗಿ ಭಾರಿ ಹುಡುಕಾಟ

ಪಾಟ್ನಾ ರೈಲು ನಿಲ್ದಾಣದಲ್ಲಿ ದೇಶದ ಇತರೆ ರೈಲು ನಿಲ್ದಾಣಗಳಿಗಿಂತಲೂ ಅತಿ ಹೆಚ್ಚು ಉಚಿತ ವೈ ಫೈ ಸವಲತ್ತನ್ನು ಬಳಸಲಾಗುತ್ತಿದ್ದು, ಬಹುತೇಕ ಮಂದಿ...
ಪಾಟ್ನಾ ರೈಲು ನಿಲ್ದಾಣ
ಪಾಟ್ನಾ ರೈಲು ನಿಲ್ದಾಣ
ಪಾಟ್ನಾ: ಪಾಟ್ನಾ ರೈಲು ನಿಲ್ದಾಣದಲ್ಲಿ ದೇಶದ ಇತರೆ ರೈಲು ನಿಲ್ದಾಣಗಳಿಗಿಂತಲೂ ಅತಿ ಹೆಚ್ಚು ಉಚಿತ ವೈ ಫೈ ಸವಲತ್ತನ್ನು ಬಳಸಲಾಗುತ್ತಿದ್ದು, ಬಹುತೇಕ ಮಂದಿ ವೈಫೈ ಬಳಸಿ ಅಶ್ಲೀಲ ಜಾಲತಾಣಗಳಿಗಾಗಿ ಜಾಲಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಉಚಿತ ವೈಫೈ ಸವಲತ್ತು ಕಲ್ಪಿಸಲಾಗಿರುವ ದೇಶದ ಇತರೆ ಯಾವುದೇ ರೈಲ್ವೆ ನಿಲ್ದಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಟನಾದಲ್ಲಿ ವೈ ಫೈ ಸವಲತ್ತು ಬಳಸಿ ಜನ ಅಂತರ್ಜಾಲವನ್ನು ಜಾಲಾಡುತ್ತಾರೆ. ಪಟನಾ ಈ ವಿಷಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಆದರೆ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾಲ ಜಾಲಾಟ ನಡೆಯುವುದು ಅಶ್ಲೀಲ ಜಾಲತಾಣಗಳಿಗಾಗಿ ಎಂದು ರೈಲ್ ಟೆಲ್ ಅಧಿಕಾರಿ ಹೇಳಿದ್ದಾರೆ.
ರೈಲು ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಉಚಿತ ವೈಫೈ ಬಳಸಿ ಅಂತರ್ಜಾಲ ಜಾಲಾಡುವಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಜಬಲ್​ಪುರ ರೈಲ್ವೇ ನಿಲ್ದಾಣವಿದ್ದು, ಬೆಂಗಳೂರು ಮತ್ತು ದೆಹಲಿ ರೈಲು ನಿಲ್ದಾಣ ಮೂರನೇ ಸ್ಥಾನದಲ್ಲಿವೆ. 
ಪಟನಾ ರೈಲು ನಿಲ್ದಾಣ ವೈಫೈ ಸವಲತ್ತು ಪಡೆದ ದೇಶದ ಮೊತ್ತ ಮೊದಲ ರೈಲು ನಿಲ್ದಾಣ. ರೈಲು ನಿಲ್ದಾಣಗಳಲ್ಲಿ ಆಪ್​ಗಳು ಮತ್ತು ಬಾಲಿವುಡ್ ಚಿತ್ರಗಳನ್ನು ಡೌನ್​ಲೋಡ್ ಮಾಡಲೂ ಜನ ಉಚಿತ ವೈಫೈಯನ್ನು ಬಳಸುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಳಕೆದಾರರು ಬಳಸುವ ಮಾಹಿತಿಯ ದಾಖಲೆಗಳಿಂದ ಅಂತರ್ಜಾಲ ಜಾಲಿಗರ ಮಾಹಿತಿ ಗೊತ್ತಾಗಿದೆ ಎನ್ನುತ್ತಾರೆ ಅಧಿಕಾರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com