ಸರ್ಜಿಕಲ್ ಸ್ಟ್ರೈಕ್ ಗೆ ಆರ್ ಎಸ್ ಎಸ್ ಬೋಧನೆ ಹೇಳಿಕೆಯನ್ನು ಖಂಡಿಸಿದ ಮಾಯಾವತಿ

ನಿರ್ದಿಷ್ಟ ದಾಳಿ ನಡೆಸಲು ಆದೇಶ ನೀಡುವುದರ ಹಿಂದೆ ‘ಆರ್‌ಎಸ್‌ಎಸ್‌ನ ಬೋಧನೆಗಳು’ ಪ್ರೇರಣೆಯಾಗಿದೆ ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಗೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಯಾವತಿ
ಮಾಯಾವತಿ

ಲಖನೌ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಲು ಆದೇಶ ನೀಡುವುದರ ಹಿಂದೆ ‘ಆರ್‌ಎಸ್‌ಎಸ್‌ನ ಬೋಧನೆಗಳು’ ಪ್ರೇರಣೆಯಾಗಿದೆ ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಗೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೇನೆ ನಡೆಸಿದ ನಿರ್ದಿಷ್ಟ ದಾಳಿಗೆ ಆದೇಶ ನೀಡುವುದರ ಹಿಂದೆ ಆರ್ ಎಸ್ಎಸ್ ನ ಬೋಧನೆಗಳು ಪ್ರೇರಣೆಯಾಗಿರಬಹುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿರುವುದು ದುರದೃಷ್ಟಕರ ಎಂದು ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಸೀಮಿತ ದಾಳಿಯ ಕೀರ್ತಿಯನ್ನು ಸೇನೆಯಿಂದ ಕಸಿದುಕೊಳ್ಳುವಂತಿದೆ ಎಂದು ಮಾಯಾವತಿ ಆರೋಪಿಸಿದ್ದು, ಸೇನಾ ಕಾರ್ಯಾಚರಣೆಯಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ ವಿರುದ್ಧ ನಾಯಕತ್ವದ ಕೊರತೆ ಆರೋಪ ಮಾಡಿರುವ ಮಾಯಾವತಿ ಬಿಜೆಪಿ ನಾಯಕತ್ವದ ಕೊರತೆ ಎದುರಿಸುತ್ತಿದ್ದು, ಬೇರೆ ಪಕ್ಷದಿಂದ ನಾಯಕರನ್ನು ತನ್ನತ್ತ ಸೆಳೆಯುವ ಯತ್ನದಲ್ಲಿ ಬಿಜೆಪಿ ತೊಡಗಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com