70 ಖರೀದಿದಾರರಿಗೆ 22 ಕೋಟಿ ಮರುಪಾವತಿಸಿ: ಪಾರ್ಶ್ವನಾಥ್ ಡೆವಲಪರ್ಸ್ ಗೆ ಸುಪ್ರೀಂ ಆದೇಶ

ನಿಗದಿತ ಸಮಯಕ್ಕೆ ಸರಿಯಾಗಿ ಫ್ಲ್ಯಾಟ್ ಗಳನ್ನು ನೀಡದ ಕಾರಣ ಖರೀದಿದಾರರಿಗೆ ಹಣ ಮರುಪಾವತಿ ಮಾಡುವಂತೆ ಪಾರ್ಶ್ವನಾಥ್ ಡೆವಲಪರ್ಸ್ ಗೆ ಸುಪ್ರೀಂ ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ನಿಗದಿತ ಸಮಯಕ್ಕೆ ಸರಿಯಾಗಿ ಫ್ಲ್ಯಾಟ್ ಗಳನ್ನು ನೀಡದ ಕಾರಣ ಖರೀದಿದಾರರಿಗೆ ಹಣ ಮರುಪಾವತಿ ಮಾಡುವಂತೆ ಪಾರ್ಶ್ವನಾಥ್ ಡೆವಲಪರ್ಸ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಘಾಜಿಯಾಬಾದ್ ನಲ್ಲಿ ಪಾರ್ಶ್ವನಾಥ್ ಎಕ್ಸೋಟಿಕಾ ಪ್ರಾಜೆಕ್ಟ್ ಅಡಿಯಲ್ಲಿ ಫ್ಲ್ಯಾಟ್ ಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿ ಈ ಡೆವಲಪ್ರ್ಸ್ ಖರೀದಿದಾರರಿಂದ ಹಣ ಪಡೆದಿದ್ದರು, ಆದರೆ ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ ಈ ಪ್ರಾಜೆಕ್ಟ್ ಅನುಮತಿಯನ್ನು ರದ್ದುಗೊಳಿಸಿತ್ತು.
ಹೀಗಾಗಿ ಎಪ್ಪತ್ತು ಮಂದಿ ಫ್ಲ್ಯಾಟ್ ಖರೀದಿದಾರರಿಗೆ ಒಟ್ಟು 22 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಪಾರ್ಶ್ವನಾಥ್ ಡೆವಲಪರ್ಸ್​ಗೆ ಆದೇಶ ನೀಡಿದೆ.

ಕಟ್ಟಡ ನಿರ್ಮಾಪಕರು ಈಗಾಗಲೇ 12 ಕೋಟಿ ರೂಪಾಯಿಗಳನ್ನು ಠೇವಣಿ ಇಟ್ಟಿದ್ದಾರೆ. ಉಳಿದ 10 ಕೋಟಿ ರೂಪಾಯಿಗಳನ್ನು ಠೇವಣಿ ಇಡಲು ಡಿಸೆಂಬರ್ 10ರವರೆಗೆ ಕಾಲಾವಕಾಶ ನೀಡಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com