ಮಯನ್ಮಾರ್ ಸಚಿವೆ ಆಂಗ್‌ ಸಾನ್‌ ಸೂ ಕಿ- ಮೋದಿ ಭೇಟಿ, 3 ಒಪ್ಪಂದಗಳಿಗೆ ಸಹಿ

ಮಯನ್ಮಾರ್ ವಿದೇಶಾಂಗ ಸಚಿವೆ ಆಂಗ್‌ ಸಾನ್‌ ಸೂ ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದು, ಮಯನ್ಮಾರ್ ಅಭಿವೃದ್ಧಿಗೆ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮಯನ್ಮಾರ್ ಸಚಿವೆ ಆಂಗ್‌ ಸಾನ್‌ ಸೂ ಕಿ- ಮೋದಿ ಭೇಟಿ
ಮಯನ್ಮಾರ್ ಸಚಿವೆ ಆಂಗ್‌ ಸಾನ್‌ ಸೂ ಕಿ- ಮೋದಿ ಭೇಟಿ

ನವದೆಹಲಿ: ಮಯನ್ಮಾರ್ ವಿದೇಶಾಂಗ ಸಚಿವೆ ಆಂಗ್‌ ಸಾನ್‌ ಸೂ ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದು, ಮಯನ್ಮಾರ್ ಅಭಿವೃದ್ಧಿಗೆ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಆಂಗ್ ಸಾನ್ ಸೂ ಕಿ ಅವರ ಭೇಟಿ ವೇಳೆ ಭಾರತ- ಮಯನ್ಮಾರ್ ನಾಯಕರು ಮೂರು ಒಪ್ಪಂದಗಳಿಗೆ ಸಹಿ ಹಾಕಿದ್ದು, ಕೃಷಿ, ನವೀಕರಿಸಬಹುದಾದ ಇಂಧನ ಶಕ್ತಿ, ವಿದ್ಯುತ್ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಒಪ್ಪಂದ ನಡೆದಿದೆ.  ಒಪ್ಪಂದಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಂಗ್ ಸಾನ್ ಸೂ ಕಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು ಭಾರತ ಮಯಾನ್ಮಾರ್ ನ ಅಭಿವೃದ್ಧಿಗೆ ಸದಾ ಬದ್ಧವಾಗಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.

"ಭಾರತೀಯರು ಮಾಯನ್ಮಾರ್ ನ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಡುತ್ತಾರೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಮಿಲಿಟರಿ ಸರ್ವಾಧಿಕಾರದಿಂದ ಈಗಷ್ಟೆ ಪ್ರಜಾಪ್ರಭುತ್ವಕ್ಕೆ ತೆರೆದುಕೊಳ್ಳುತ್ತಿರುವ ಮಯನ್ಮಾರ್ ನೊಂದಿಗೆ ಭಾರತದ ಭದ್ರತಾ ಸಹಕಾರ ಹೊಸದಾಗಿ ರೂಪುಗೊಳ್ಳುತ್ತಿದೆ ಮಯನ್ಮಾರ್ ನ್ನು ಆಧುನಿಕ ಮತ್ತು ಶ್ರೀಮಂತ ರಾಷ್ಟ್ರವನ್ನಾಗಿಸುವ ಕಾರ್ಯದಲ್ಲಿ ಭಾರತ ಹಾಗು ಭಾರತದ ಮಿತ್ರ ರಾಷ್ಟ್ರಗಳು ಸಹಕಾರ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಯನ್ಮಾರ್ ನಾಯಕಿಗೆ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com