ಬಾರಾಮುಲ್ಲಾದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಸೇನಾ ದಾಳಿ: 44 ಭಯೋತ್ಪಾದಕರ ಬಂಧನ

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾ ಪಡೆ ಉಗ್ರರ ಅಡಗುದಾಣಗಳನ್ನು ಭೇದಿಸಿದ್ದು, 44 ಭಯೋತ್ಪಾದಕ ಬೆಂಬಲಿಗರನ್ನು ಬಂಧಿಸಿದೆ.
ಬಾರಾಮುಲ್ಲಾದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಸೇನಾ ದಾಳಿ
ಬಾರಾಮುಲ್ಲಾದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಸೇನಾ ದಾಳಿ

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾ ಪಡೆ ಉಗ್ರರ ಅಡಗುದಾಣಗಳನ್ನು ಭೇದಿಸಿದ್ದು, 44 ಭಯೋತ್ಪಾದಕ ಬೆಂಬಲಿಗರನ್ನು ಬಂಧಿಸಿದೆ.

ಅಡಗುದಾಣಗಳಿಂದ ಚೀನಾ ಹಾಗು ಪಾಕಿಸ್ತಾನ ಬಾವುಟ, ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಲೆಟರ್ ಹೆಡ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಬಾರಾಮುಲ್ಲಾದಲ್ಲಿ ಅ.17 ರಂದು ನಡೆದ 12 ಗಂಟೆಗಳ ಕಾರ್ಯಾಚರಣೆಯಲ್ಲಿ 700 ಕ್ಕೂ ಹೆಚ್ಚು ಮನೆಗಳನ್ನು ಶೋಧಿಸಲಾಗಿದ್ದು, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿದ್ದ 44 ಜನರನ್ನು ಬಂಧಿಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಉಗ್ರರ ಅಡಗುದಾಣಗಳಲ್ಲಿ ಪೆಟ್ರೋಲ್ ಬಾಂಬ್, ಚೀನಾ-ಪಾಕ್ ಧ್ವಜಗಳು, ಮೊಬೈಲ್ ಫೋನ್, ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ಎದುರಿಸುತ್ತಿರುವ ಕಾಶ್ಮೀರದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆಯ ನಂತರ ಕಳೆದ ಮೂರು ತಿಂಗಳಿನಿಂದ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಸೇನೆ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಸ್ಥಳೀಯರ ನಡುವೆ ಸಂಘರ್ಷ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com