ಸಂಗಮದ ನೀರು ಕುಡಿದಿರುವ ನಾನು ಅಲಹಾಬಾದಿನ ಗೂಂಡಾ: ಕಾಟ್ಜು

ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಏ ದಿಲ್ ಹೈ ಮುಷ್ಕಿಲ್ ಚಿತ್ರ ..
ಮಾರ್ಕಂಡೇಯ ಕಾಟ್ಜು
ಮಾರ್ಕಂಡೇಯ ಕಾಟ್ಜು
Updated on

ಮುಂಬಯಿ: ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಏ ದಿಲ್ ಹೈ ಮುಷ್ಕಿಲ್  ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಂಎನ್ಎಸ್ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡದ್ದಕ್ಕಾಗಿ ಮಾರ್ಕಂಡೇಯ ಕಾಟ್ಜು ಅವರು ಎಂಎನ್‌ಎಸ್‌ ಮೇಲೆ ಹರಿಹಾಯ್ದಿದ್ದಾರೆ. ಎಂಎನ್‌ಎಸ್‌ ಕಾರ್ಯಕರ್ತರು ಅಸಹಾಯಕ ಜನರ ಮೇಲೆ ಆಕ್ರಮಣ ನಡೆಸುವುದು ಏಕೆ? ನಿಮಗೆ ಧೈರ್ಯ ಇದ್ದರೆ, ನನ್ನ ಬಳಿ ಬನ್ನಿ. ನಿಮಗಾಗಿ ನನ್ನಲ್ಲಿ ಒಂದು ಕೋಲು ಇದೆ’ ಎಂದು ಕಾಟ್ಜು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಎಂಎನ್‌ಎಸ್‌ ಕಾರ್ಯಕರ್ತರು ಅರಬ್ಬಿ ಸಮುದ್ರದ ಉಪ್ಪು ನೀರು ಕುಡಿದಿರುವ ಗೂಂಡಾಗಳು. ನಾನು ಸಂಗಮದ ನೀರು ಕುಡಿದಿರುವ ಅಲಹಾಬಾದಿನ ಗೂಂಡಾ ಎಂದೂ ಕಾಟ್ಜು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com