ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆಚ್ಚದೆಯಿಂದ ಹೋರಾಡಿ ಸಿಂಹದ ಬಾಯಿಂದ ತಮ್ಮ ಹಸುಗಳನ್ನು ರಕ್ಷಿಸಿದ ಸಹೋದರಿಯರು

ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಅವುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದ ಸಿಂಹದ ವಿರುದ್ಧ ಇಬ್ಬರು ಹೋರಾಡಿದ ಸಹೋದರಿಯರು ವೀರಾವೇಶ .....

ಅಹಮದಾಬಾದ್: ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಅವುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದ ಸಿಂಹದ ವಿರುದ್ಧ ಇಬ್ಬರು ಹೋರಾಡಿದ ಸಹೋದರಿಯರು ವೀರಾವೇಶ ಮೆರೆದಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

19 ವರ್ಷದ ಸಂತೊಕ್ ರಬರಿ ಹಾಗೂ 18 ವರ್ಷದ ಮೈಯಾ ಈ ಸಾಹಸ ತೋರಿದ ಯುವತಿಯರು. ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗೀರ್ ಅರಣ್ಯ ಪ್ರದೇಶದ ತುಳಸಿ ಶ್ಯಾಮ್ ಪ್ರದೇಶದ ನಿವಾಸಿಗಳಾಗಿರುವ ಇವರು, ಜಾನುವಾರುಗಳನ್ನು ಮೇಯಿಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು.

ಇವರ ತಂದೆ ಪಾರ್ಶ್ವವಾಯು ಪೀಡಿತಾರಾಗಿದ್ದಾರೆ. ಹೀಗಾಗಿ ತಂದೆಯ ಕೆಲಸವನ್ನು ಈ ಇಬ್ಬರು ಯುವತಿಯರು ಮಾಡುತ್ತಿದ್ದರು.

ಅಕ್ಟೋಬರ್ 9ರಂದು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಅವುಗಳ ಮೇಲೆ ಸಿಂಹವೊಂದು ದಾಳಿ ಮಾಡಲು ಮುಂದಾಗಿದೆ. ಆ ವೇಳೆ ಈ ಸಹೋದರಿಯರು ಧೈರ್ಯಗೆಡದೇ ಕೈಯಲ್ಲಿದ್ದ ಕಟ್ಟಿಗೆಯಿಂದ ಬೆದರಿಸಿದ್ದಾರೆ. ಸಿಂಹ ಹೆದರಿಕೆಯಿಂದ ಸ್ವಲ್ಪ ಹಿಂದೆ ಸರಿದಿದೆ. ನಂತರ ಇಬ್ಬರು ತಮ್ಮ ಬಳಿಯಿದ್ದ ಕೋಲುಗಳಿಂದ ಸಿಂಹವನ್ನು ಬೆದರಿಸಿ ಹಿಮ್ಮೆಟ್ಟಿಸಿದ್ದಾರೆ. ಇದರಿಂದ ಸಿಂಹ ಹೆದರಿ ಮರಳಿ ಹೋಗಿದೆ.

ಈ ಪ್ರಾಂತ್ಯದಲ್ಲಿ ಸಿಂಹಗಳ ಓಡಾಟ ಹೆಚ್ಚಿದೆ. ಆದರೆ ಸಿಂಹಗಳು ಮನುಷ್ಯರಿಗೆ ತುಂಬಾ ಹೆದರುವುದರಿಂದ ಯುವತಿಯರ ಬೆದರಿಕೆಕೆ ಅದು ಓಡಿ ಹೋಗಿದೆ ಎಂದು ವನ್ಯ ಜೀವಿ ತಕ್ಷರು ಅಭಿಪ್ರಾಯ ಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com