ಜಾಕಿರ್ ನಾಯಕ್ ನ ಐಆರ್ ಎಫ್ ನ್ನು ಅಕ್ರಮ ಸಂಘಟನೆ ಎಂದು ಘೋಷಿಸಲಿರುವ ಕೇಂದ್ರ?

ಇಸ್ಲಾಮ್ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ್ನು ಕೇಂದ್ರ ಸರ್ಕಾರ ಅಕ್ರಮ ಸಂಘಟನೆ ಎಂದು ಶೀಘ್ರವೇ ಘೋಷಿಸಲಿದೆ ಎಂಬ ವರದಿಗಳು ಪ್ರಕಟವಾಗಿದೆ.
ಜಾಕಿರ್ ನಾಯಕ್
ಜಾಕಿರ್ ನಾಯಕ್

ನವದೆಹಲಿ: ಇಸ್ಲಾಮ್ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ್ನು ಕೇಂದ್ರ ಸರ್ಕಾರ ಅಕ್ರಮ ಸಂಘಟನೆ ಎಂದು ಶೀಘ್ರವೇ ಘೋಷಿಸಲಿದೆ ಎಂಬ ವರದಿಗಳು ಪ್ರಕಟವಾಗಿದೆ.

ಕೇಂದ್ರ ಗೃಹ ಇಲಾಖೆ ಜಾಕಿರ್ ನಾಯಕ್ ನ ವಿವಾದಿತ ಭಾಷಣಗಳನ್ನು ಗಮನಿಸಿದ್ದು, ಅವುಗಳನ್ನು ದ್ವೇಷಪೂರಿತ ಭಾಷಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಜಾಕಿರ್ ನಾಯಕ್ ನ ಸಂಘಟನೆಯನ್ನು ಅಕ್ರಮ ಸಂಘಟನೆ ಎಂದು ಘೋಷಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ಕಾನೂನು ಆಯೋಗಕ್ಕೆ ಪ್ರಸ್ತಾವನೆ ಕಳಿಸಲಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಪ್ರಸ್ತಾವನೆ ಬಗ್ಗೆ ಕಾನೂನು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಜಾಕಿರ್ ನಾಯಕ್ ನ ಇಸ್ಲಾಮಿಕ್ ರ್ರಿಸರ್ಚ್ ಫೌಂಡೇಶನ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಬಾಂಗ್ಲಾದೇಶದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ನ ಭಾಷಣಗಳು ಸ್ಫೂರ್ತಿಯಾಗಿದ್ದವು ಎಂಬ ಮಾಹಿತಿ ಬಹಿರಂಗವಾದ ಮೇಲೆ ಕೇಂದ್ರ ಗೃಹ ಇಲಾಖೆ ಜಾಕಿರ್ ನಾಯಕ್ ನ ಚಟುವಟಿಕೆ ಹಾಗು ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮೇಲೆ ನಿಗಾ ವಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com