ನ್ಯಾಯಾಧೀಶರ ನೇಮಕದಲ್ಲಿ ವಿಳಂಬ: ಸುಪ್ರೀಂ ನಿಂದ ಕೇಂದ್ರಕ್ಕೆ ತರಾಟೆ

ಕೊಲಿಜಿಯಂ ಶಿಫಾರಸ್ಸಿನ ಹೊರತಾಗಿಯೂ ನ್ಯಾಯಾಧೀಶರ ನೇಮಕ ಮಾಡದೆ ಇರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೊಲಿಜಿಯಂ ಶಿಫಾರಸ್ಸಿನ ಹೊರತಾಗಿಯೂ ನ್ಯಾಯಾಧೀಶರ ನೇಮಕ ಮಾಡದೆ ಇರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಧೀಶರ ನೇಮಕದಲ್ಲಿ ವಿಳಂಬವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿರುವ ಸುಪ್ರೀಂ ಕೋರ್ಟ್, ಸಾಂವಿಧಾನಿಕ ಸಂಸ್ಥೆಯನ್ನು ಸ್ಥಗಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಮೆಮರ್ಯಾಂಡಮ್ ಆಫ್ ಪ್ರೊಸೀಜರ್' (ಎಂಒಪಿ) ಇಲ್ಲದೆಯೂ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ನೀವು ಬದ್ಧರಾಗಿರುವಿರಿ ಎಂದು ಎಚ್ಚರಿಸಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿಗಳಿಗೆ ಮೆಮರ್ಯಾಂಡಮ್ ಆಫ್ ಪ್ರೊಸೀಜರ್' (ಎಂಒಪಿ) ಅಗತ್ಯವಿಲ್ಲ ನ್ಯಾಯಾಧೀಶರ ನೇಮಕವಾಗದೆ ದೇಶದಲ್ಲಿರುವ ಹಲವು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಎದುರಾಗಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com