
ನವದೆಹಲಿ: ವಾಯುಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ವಾಯುಶುದ್ಧೀಕರಣ ಯಂತ್ರಗಳನ್ನು ಬಳಕೆ ಮಾಡುವುದಾಗಿ ತಿಳಿಸಿದೆ.
ಐದು ಪ್ರಮುಖ ಚೌಕಗಳಲ್ಲಿ ಪ್ರಾರಂಭದ ಹಂತವಾಗಿ ಎರಡು ತಿಂಗಳಲ್ಲಿ ವಾಯುಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಸಾರಿಗೆ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದು, ಪ್ರಾರಂಭಿಕ ಹಂತದ ಯೋಜನೆ ಯಶಸ್ವಿಯಾದರೆ ಉಳಿದ ಪ್ರದೇಶಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಬಾಂಬೆ ಐಐಟಿ ಸಹಯೋಗದಲ್ಲಿ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಗಾಳಿಯನ್ನು ಶುದ್ಧೀಕರಣಗೊಳಿಸುವ ವ್ಯವಸ್ಥೆಯನ್ನು ರೂಪಿಸಿದ್ದು, ದೆಹಲಿಯ ಆನಂದ್ ವಿಹಾರ್, ಕಾಶ್ಮೀರಿ ಗೇಟ್, ಐಟಿಒ ಹಾಗು ಐಐಟಿ ದೆಹಲಿ/ ಏಮ್ಸ್ ಬಳಿ ಅಳವಡಿಕೆ ಮಾಡಲಾಗುತ್ತದೆ ಎಂದು ದೆಹಲಿ ಸಾರಿಗೆ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ.
Advertisement