ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆ

ಹಿಂದೂಗಳ ಸಡಗರದ ಹಬ್ಬ ದೀಪಾವಳಿಯನ್ನು ಇದೀಗ ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತಿದೆ. ಅಂತೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವಿದ್ಯುತ್ ದ್ವೀಪಗಳನ್ನು...
ದೀಪಾವಳಿ
ದೀಪಾವಳಿ
ಹಿಂದೂಗಳ ಸಡಗರದ ಹಬ್ಬ ದೀಪಾವಳಿಯನ್ನು ಇದೀಗ ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತಿದೆ. ಅಂತೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವಿದ್ಯುತ್ ದ್ವೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. 
ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಕಟ್ಟಡದ ಮೇಲೆ ವಿದ್ಯುತ್ ದೀಪವನ್ನು ಬೆಳಗಿಸಿ ಜನತೆಗೆ ಶುಭಾಶಯ ಹೇಳಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ. 
ಸಯ್ಯದ್ ಅಕ್ಬರುದ್ದೀನ್ ಅವರು ತಮ್ಮ ಟ್ವೀಟ್ ನಲ್ಲಿ ದೀಪಾವಳಿ ಶುಭಾಶಯ. ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿಯನ್ನು ಆಚರಿಸಲಾಯಿತು ಎಂದು ತಿಳಿಸಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ದೀಪಾವಳಿ ಆಚರಣೆಗೆ ಮೂಲಕ ಮೊದಲ ಹೆಜ್ಜೆ ಇಟ್ಟಿರುವ ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿ ಅಧ್ಯಕ್ಷ ಪೀಟರ್‌ ಥಾಮ್ಸನ್‌ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 
ಈ ಇಬ್ಬರು ಪರಸ್ಪರ ದೀಪಾವಳಿಯ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ. ಇನ್ನು ದೀಪಾವಳಿ ಪ್ರಯುಕ್ತ ವಿಶ್ವಸಂಸ್ಥೆ ಕಟ್ಟಡದಲ್ಲಿ 29 ರಿಂದ 31ರವರೆಗೆ ವಿದ್ಯುತ್ ದೀಪಗಳನ್ನು ಬೆಳಗಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com