ದೆಹಲಿ ಕೋರ್ಟ್ ನ 50 ನೇ ವಾರ್ಷಿಕೋತ್ಸವ ಆಚರಣೆ: ನ್ಯಾಯಾಧೀಶರಿಗೆ  ಸ್ವಲ್ಪ ಮುಗುಳ್ನಗೆ ಬೀರಿ ಎಂದ ಪ್ರಧಾನಿ
ದೆಹಲಿ ಕೋರ್ಟ್ ನ 50 ನೇ ವಾರ್ಷಿಕೋತ್ಸವ ಆಚರಣೆ: ನ್ಯಾಯಾಧೀಶರಿಗೆ ಸ್ವಲ್ಪ ಮುಗುಳ್ನಗೆ ಬೀರಿ ಎಂದ ಪ್ರಧಾನಿ

ದೆಹಲಿ ಕೋರ್ಟ್ ನ 50 ನೇ ವಾರ್ಷಿಕೋತ್ಸವ ಆಚರಣೆ: ನ್ಯಾಯಾಧೀಶರಿಗೆ ಸ್ವಲ್ಪ ಮುಗುಳ್ನಗೆ ಬೀರಿ ಎಂದ ಪ್ರಧಾನಿ

ದೆಹಲಿ ಹೈಕೋರ್ಟ್ ನ 50 ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಧೀಶರಿಗೆ ಮನಸ್ಸನ್ನು ಹಗುರಾಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
Published on

ನವದೆಹಲಿ: ದೆಹಲಿ ಹೈಕೋರ್ಟ್ ನ 50 ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಧೀಶರಿಗೆ ಮನಸ್ಸನ್ನು ಹಗುರಾಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.  

ನ್ಯಾಯಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಸಾಂಘಿಕ ಪ್ರಯತ್ನದ ಅಗತ್ಯವಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ , 50 ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ, cಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ.

ನಂತರ ತಮ್ಮ ಭಾಷಣವನ್ನು ನ್ಯಾಯಾಂಗ ಎದುರಿಸುತ್ತಿರುವ ಸಮಸ್ಯೆಗಳತ್ತ ಕೇಂದ್ರೀಕರಿಸಿದ ಪ್ರಧಾನಿ, ನ್ಯಾಯಾಂಗ ಪ್ರಸ್ತುತ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಈ ಸವಾಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇರುವ ಅವಕಾಶವಾಗಿದ್ದು, ಎಲ್ಲರು ಒಗ್ಗಟ್ಟಿನಿಂದ ಯತ್ನಿಸಿದರೆ, ಸಮಸ್ಯೆಗಳನ್ನು ಸವಾಲುಗಳನ್ನು ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೆ ವೇಳೆ ಸಾಮಾನ್ಯ ಜನರಲ್ಲಿಯೂ ನ್ಯಾಯಾಂಗ ಅರಿವು ಮೂಡಬೇಕು ಎಂದಿರುವ ಪ್ರಧಾನಿ ಮೋದಿ, ಅತ್ಯಂತ ಕೆಳಸ್ಥರದಲ್ಲಿರುವವರನ್ನು ವ್ಯವಸ್ಥೆಯ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದ್ದಾರೆ. ಇದೆ ವೇಳೆ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರನ್ನು ಸ್ಮರಿಸಿರುವ ಪ್ರಧಾನಿ,  ದೇಶದ ಮೊದಲ ಗೃಹ ಸಚಿವರು ದೇಶದ ಏಕತೆಗಾಗಿ ಪಟೇಲರು ನಿರ್ದೇಶನ ನೀಡಿದ್ದರು. ಅವರ ಕೊಡುಗೆಗಾಗಿ ಇಂದು ದೇಶವೇ ಅವರಿಗೆ ನಮಿಸುತ್ತದೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಸಿಜೆಐ ಟಿಎಸ್ ಠಾಕೂರ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com