ಸಿಮಿ ಸಂಘಟನೆಯ ಬಗ್ಗೆ ಕೆಲವು ಮಾಹಿತಿ

ಭೋಪಾಲ್ ನ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಕೊಂದು ತಪ್ಪಿಸಿಕೊಂಡು ಬಂದಿದ್ದ ಎಂಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭೋಪಾಲ್ ನ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಕೊಂದು ತಪ್ಪಿಸಿಕೊಂಡು ಬಂದಿದ್ದ ಎಂಟು ಮಂದಿ ಸಿಮಿ ಸಂಘಟನೆಯ ಉಗ್ರಗಾಮಿಗಳು ಎನ್ ಕೌಂಟರ್ ನಲ್ಲಿ ಹತರಾಗಿದ್ದಾರೆ. ಈ ಮೂಲಕ ಇಂದು ಮತ್ತೆ ಸುದ್ದಿಯಾಗಿರುವ ಸಿಮಿ ಸಂಘಟನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
-ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ ಒಂದು ನಿಷೇಧಿತ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯಾಗಿದ್ದು ಅದು ಉತ್ತರ ಪ್ರದೇಶದ ಆಲಿಘಡದಲ್ಲಿ 1977ರ ಏಪ್ರಿಲ್ 25ರಂದು ಅಸ್ತಿತ್ವಕ್ಕೆ ಬಂತು.
-ಆರಂಭದಲ್ಲಿ ಇದು ಜಮಾತ್-ಇ-ಇಸ್ಲಾಮಿ ಹಿಂದ್ ವಿದ್ಯಾರ್ಥಿ ಸಂಘಟನೆಯಾಗಿತ್ತು.
-ಮೊಹಮ್ಮದ್ ಅಹ್ಮದುಲ್ಲಾ ಸಿದ್ದಿಕಿ ಅದರ ಸ್ಥಾಪಕಾಧ್ಯಕ್ಷರು.
- ಸಿಮಿ, ಅಮೆರಿಕಾದಲ್ಲಿ ಸೆಪ್ಟೆಂಬರ್ 11, 2011ರಂದು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಅದನ್ನು ನಿಷೇಧಿಸಲಾಗಿತ್ತು.
-2008ರಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
-2014ರಲ್ಲಿ ಮತ್ತೆ 5 ವರ್ಷಗಳಿಗೆ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಸಿಮಿ ಸಂಘಟನೆಯ ನಿಷೇಧ ಅವಧಿಯನ್ನು ವಿಸ್ತರಿಸಲಾಯಿತು. ಸಂಘಟನೆಯ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯದಿದ್ದರೆ ದೇಶದ ಭದ್ರತೆ ಮತ್ತು ಸಂಘಟನೆಗೆ ತೊಂದರೆಯಿದೆ.
- ಭಯೋತ್ಪಾದಕರು ಮತ್ತು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ(ಟಾಡಾ ಕಾಯ್ದೆ), ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ  ತಡೆ ಕಾಯ್ದೆ 1967ರ ಪ್ರಕಾರ ಸಿಮಿ ಸಂಘಟನೆಯ ಸದಸ್ಯರ ವಿರುದ್ಧ ಕೇಸು ದಾಖಲಿಸಬಹುದು.
- ಸಂಘಟನೆ ಔಪಚಾರಿಕವಾಗಿ ಕಣ್ಮರೆಯಾದರೂ ಕೂಡ ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ.
-ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಸಿಮಿ ಸಂಘಟನೆ ಇನ್ನೂ ಕೂಡ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಭದ್ರವಾದ ನೆಲೆಯೂರಿದೆ ಎನ್ನಲಾಗುತ್ತಿದೆ.
- ಇಂಡಿಯನ್ ಮುಜಾಹಿದ್ದೀನ್ (ಐಎಮ್) ಸಿಮಿ ಸಂಘಟನೆಯ ಶಾಖೆಯಾಗಿದೆ ಎಂದು ಕೆಲವರು ಹೇಳಿದರೆ ಎರಡೂ ಗುಂಪುಗಳು ಸಂಬಂಧ ಹೊಂದಿದ್ದರೂ ಕೂಡ ಬೇರೆ ಬೇರೆ ಎಂದು ಇನ್ನು ಕೆಲವು ಸಂಘಟನೆಗಳು ಹೇಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com