ಹೇರ್ ಕ್ಲಿಪ್ ಕಾಣೆಯಾಗಿದ್ದಕ್ಕೆ 12 ವರ್ಷದ ಬಾಲಕಿಗೆ ಶಿಕ್ಷೆ ನೀಡಿದ ಶಿಕ್ಷಕಿ

ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿ ಮತ್ತು ಆಕೆಯ ಮದುವೆಯಾದ ಮಗಳು ತಮ್ಮ ಜೊತೆ ವಾಸಿಸುತ್ತಿದ್ದ ಸಂಬಂಧಿಕರೊಬ್ಬರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಂಜಾವೂರು: ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿ ಮತ್ತು ಆಕೆಯ ಮದುವೆಯಾದ ಮಗಳು ತಮ್ಮ ಜೊತೆ ವಾಸಿಸುತ್ತಿದ್ದ ಸಂಬಂಧಿಕರೊಬ್ಬರ 12 ವರ್ಷದ ಹುಡುಗಿಗೆ ಬಿಸಿಯಾದ ಕಬ್ಬಿಣದ ರಾಡ್ ನಿಂದ ಹೊಡೆದ ಘಟನೆ ತಂಜಾವೂರಿನಲ್ಲಿ ನಡೆದಿದೆ. ಕೂದಲಿಗೆ ಹಾಕುವ ಕ್ಲಿಪ್ಪನ್ನು ತೆಗೆದುಕೊಂಡಿದ್ದಾಳೆ ಎಂದು ಯೋಚಿಸಿ ಹೀಗೆ ಕಠಿಣ ಶಿಕ್ಷೆ ನೀಡಿದ್ದಾರೆ.
ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆಯೊಂದು ಬರುತ್ತದೆ. ಪಾಪನಾಸನಮ್ ನಲ್ಲಿ ಮನೆಗೆಲಸಕ್ಕಿರುವ ಹುಡುಗಿಯೊಬ್ಬಳನ್ನು ಮನೆಯವರು ಸರಿಯಾಗಿ ನೋಡಿಕೊಳ್ಳುವುದಿಲ್ಲ. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆಂದು. ಈ ಕರೆಯ ಮೇರೆಗೆ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳ ತಂಡ ಮೊನ್ನೆ ಆಗಸ್ಟ್ 27ರಂದು ಮನೆಗೆ ಭೇಟಿ ನೀಡಿದಾಗ ಹುಡುಗಿಯ ಎಡಗೈಯಲ್ಲಿ ಮೂರು ಗಾಯಗಳಾಗಿದ್ದವು.
ವಿಚಾರಣೆ ನಡೆಸಿದಾಗ, ಬಾಲಕಿಯ ತಂದೆ ತಮಿಳು ನಾಡಿನ ಕರೂರು ಜಿಲ್ಲೆಯ ಗೌಂದನ್ ಪಟ್ಟಿಯವರಾಗಿದ್ದು, ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಕೆಯ ತಾಯಿ ಮರು ಮದುವೆಯಾಗಿದ್ದರು. ಮಗಳನ್ನು ಸಂಬಂಧಿಕರಾದ ಶಾಲಾ ಶಿಕ್ಷಕಿ ರಹಿನಿ ಹತ್ತಿರ ಬಿಟ್ಟರು. ರಾಹಿನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿಯೇ ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದಳು. 
ಕೆಲ ದಿನಗಳ ಹಿಂದೆ ರಾಹಿನಿ ಮನೆಯಿಂದ ಹೇರ್ ಕ್ಲಿಪ್ ವೊಂದು ಕಾಣೆಯಾಗಿತ್ತು. ರಾಹಿಣಿ ಮತ್ತು ಅವರ ಮಗಳು ಸರಣ್ಯ ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದ್ದಾರೆ. ಹೇರ್ ಕ್ಲಿಪ್ ಸಿಗದಿದ್ದಾಗ ಇಬ್ಬರೂ ಸೇರಿ ಬಾಲಕಿಗೆ ಹೊಡೆದಿದ್ದಾರೆ.
ಅಧಿಕಾರಿಗಳು ವಿಚಾರಿಸುವಾಗ ಆರಂಭದಲ್ಲಿ ಬಾಲಕಿ ಸತ್ಯ ಹೇಳಲು ಭಯದಿಂದ ನಿರಾಕರಿಸಿದ್ದಾಳೆ. ಕುಕ್ಕರ್ ತಾಗಿ ಗಾಯವಾಗಿದೆ ಎಂದು ಹೇಳಿದ್ದಾಳೆ. ನಂತರ ತನಗೆ ಹೊಡೆದಿದ್ದಾರೆ ಎಂದು ಹೇಳಿದ್ದಾಳೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಸಮಿತಿ ಅಧಿಕಾರಿಗಳು ಆಕೆಯನ್ನು ತಂಜಾವೂರಿನ ಸರ್ಕಾರಿ ಮನೆಯಲ್ಲಿ ಆಶ್ರಯ ಕಲ್ಪಿಸುವಂತೆ ಹೇಳಿದ್ದಾರೆ. ಕೇಸು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com