ಹೆಂಡತಿಯನ್ನು ಕೊಲ್ಲುವುದಕ್ಕಿಂತ ತ್ರಿವಳಿ ತಲಾಕ್ ಉತ್ತಮ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಲವೊಮ್ಮೆ ವೈವಾಹಿಕ ಸಂಬಂಧಗಳು ಸರಿ ಹೊಂದದೇ ದಂಪತಿ ಪ್ರತ್ಯೇಕವಾಗಲು ನಿರ್ಧರಿಸುತ್ತಾರೆ, ಈ ವೇಳೆ ಕಾನೂನು ಹೋರಾಟ, ನ್ಯಾಯಾಂಗ ಪ್ರಕ್ರಿಯೆಗಳು ಸುದೀರ್ಘ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವೈಯಕ್ತಿಕ ಕಾನೂನಿನಲ್ಲಿ ಸಾಮಾಜಿಕ ಸುಧಾರಣೆ ಬಗ್ಗೆ ಮತ್ತೆ ಬರೆಯಲು ಸಾಧ್ಯವಿಲ್ಲ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರಿಂಕೋರ್ಟ್ ಗೆ ತಿಳಿಸಿದೆ.

ತ್ರಿವಳಿ ತಲಾಕ್ ಬಗ್ಗೆ ನಡೆದ ವಿಚಾರಣೆ ವೇಳೆ, ಸಂವಿಧಾನದ ಭಾಗ ಮೂರಕ್ಕೆ ಧಕ್ಕೆಯಾಗುತ್ತದೆಂಬ ಕಾರಣಕ್ಕೆ ವಯಕ್ತಿಕ ಕಾನೂನುಗಳನ್ನು ಪ್ರಶ್ನಿಸಲಾಗದು ಎಂದು ಹೇಳಿದೆ.

ಕೆಲವೊಮ್ಮೆ ವೈವಾಹಿಕ ಸಂಬಂಧಗಳು ಸರಿ ಹೊಂದದೇ ದಂಪತಿ ಪ್ರತ್ಯೇಕವಾಗಲು ನಿರ್ಧರಿಸುತ್ತಾರೆ, ಈ ವೇಳೆ ಕಾನೂನು ಹೋರಾಟ, ನ್ಯಾಯಾಂಗ ಪ್ರಕ್ರಿಯೆಗಳು ಸುದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಈ ವೇಳೆ ನಿರಾಸೆಗೊಂಡು ಅಪರಾಧ ಮಾರ್ಗ ಹಿಡಿಯುತ್ತಾರೆ, ಹೆಂಡತಿಯನ್ನು ಕೊಲ್ಲುವ ಬದಲು ತ್ರಿವಳಿ ತಲಾಕ್ ಹೇಳುವುದೇ ಉತ್ತಮ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯ ಪಟ್ಟಿದೆ.

ದೈಹಿಕವಾಗಿ ಇಬ್ಬರು ಸಮಾನರಲ್ಲದ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಒಪ್ಪಂದ ಮದುವೆ. ಇದರಲ್ಲಿ ಪುರುಷನೇ ಹೆಚ್ಚು ಶಕ್ತಿವಂತ, ಮಹಿಳೆ ಬಲಹೀನಳಾಗಿರುತ್ತಾಳೆ. ಇಬ್ಬರಿಗೂ ವಿಚ್ಛೇದನ ನೀಡಲು ನ್ಯಾಯಾಲಯ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಮರು ಮದುವೆಗೆ ತೊಂದರೆಯಾಗುತ್ತದೆ, ಹೀಗಾಗಿ ತ್ರಿವಳಿ ತಲಾಕ್ ಪ್ರಕ್ರಿಯೆಯೆ ಸರಿಯಾಗಿದ್ದು ಎಂದು ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿ ಸಮರ್ಥಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com