ಟ್ರಂಪ್ ಭೇಟಿಗೆ ಮೆಕ್ಸಿಕೋದಲ್ಲಿ ಭುಗಿಲೆದ್ದ ಆಕ್ರೋಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ಮೆಕ್ಸಿಕೋಗೆ ಭೇಟಿ ನೀಡಿದ್ದಕ್ಕೆ ಮೆಕ್ಸಿಕೋದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮೆಕ್ಸಿಕೋದಲ್ಲಿ ಡೊನಾಲ್ಡ್ ಟ್ರಂಪ್
ಮೆಕ್ಸಿಕೋದಲ್ಲಿ ಡೊನಾಲ್ಡ್ ಟ್ರಂಪ್

ಮೆಕ್ಸಿಕೋ ಸಿಟಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ಮೆಕ್ಸಿಕೋಗೆ ಭೇಟಿ ನೀಡಿದ್ದಕ್ಕೆ ಮೆಕ್ಸಿಕೋದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡಿದ ಮೆಕ್ಸಿಕೋ ಅಧ್ಯಕ್ಷರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಆಹ್ವಾನ ನೀಡಿರುವ ಕ್ರಮವನ್ನು ಅಲ್ಲಿನ ಜನತೆ ನಂಬಿಕೆ ದ್ರೋಹ ಎಂದು ಹೇಳಿದ್ದಾರೆ. ಮೆಕ್ಸಿಕೋದ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ದೇಶಕ  ಅಲೆಜಾಂಡ್ರೊ ಜಿ. ಇನಾರಿಟು ಸೇರಿದಂತೆ ಹಲವು ಗಣ್ಯರು ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಅಸಮಾಧಾನಗೊಂಡಿದ್ದು, ದೇಶದ ಶತೃವನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.

ವರ್ಷದ ಹಿಂದೆ ವಿಶ್ವದ ಎದುರು ಮೆಕ್ಸಿಕೋಗೆ ಅವಮಾನ ಮಾಡಿ ಬೆದರಿಕೆ ಹಾಕಿದ್ದವರಿಗೆ ಆಹ್ವಾನ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ನ್ನು ಮೆಕ್ಸಿಕೋ ಒಪ್ಪಿಕೊಂಡಂತಾಗಿದೆ ಎಂದು  ಅಲೆಜಾಂಡ್ರೊ ಜಿ. ಇನಾರಿಟು ಸ್ಪ್ಯಾನಿಷ್ ದಿನಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ. ದೇಶಕ್ಕೆ ಅವಮಾನ ಮಾಡಿದ ವ್ಯಕ್ತಿಯನ್ನು ಸ್ವಾಗತಿಸಿರುವುದು ತಮಗೆ ನೋವು ತಂದಿದೆ ಎಂದು ಮೆಕ್ಸಿಕೋ ಸಿಟಿಯ ಆರ್ಥಿಕ ಬೆಳವಣಿಗೆ ಕಾರ್ಯದರ್ಶಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com