ರಾಜಕಾರಣಿಗಳ ಬೆನ್ನುಬೀಳುವುದನ್ನು ನಿಲ್ಲಿಸಿ : ಮಾಧ್ಯಮಗಳಿಗೆ ಮೋದಿ ಸಲಹೆ

ರಾಜಕಾರಣಿಗಳ ಹಿಂದೆ ಬೀಳುವುದನ್ನು ನಿಲ್ಲಿಸಿ, ಪ್ರತಿದಿನ ಕಷ್ಟಪಟ್ಟು, ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶವನ್ನು ಹೆಮ್ಮೆ ಪಡುವಂತೆ ಮಾಡುವ ಕ್ರೀಡಾಪಟುಗಳ ..
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ರಾಜಕಾರಣಿಗಳ ಹಿಂದೆ ಬೀಳುವುದನ್ನು ನಿಲ್ಲಿಸಿ, ಪ್ರತಿದಿನ ಕಷ್ಟಪಟ್ಟು, ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶವನ್ನು ಹೆಮ್ಮೆ ಪಡುವಂತೆ ಮಾಡುವ ಕ್ರೀಡಾಪಟುಗಳ ಸಾಧನೆ ಬಗ್ಗೆ ಗಮನ ಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ಖಾಸಗಿ ಆಂಗ್ಲ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ರೀಡಾಪಟುಗಳು ಶ್ರಮವಹಿಸಿ, ಬೆವರು ಹರಿಸಿ ಸಾಧನೆ ಮಾಡುತ್ತಾರೆ, ಹೀಗಾಗಿ ಜವಾಬ್ದಾರಿಯುತ ಮಾಧ್ಯಮ ಗಂಭೀರ ವಿಷಯಗಳ ಬಗ್ಗೆ ಗಮನ ಕೇಂದ್ರಿಕರಿಸಬೇಕು, ರಾಜಕಾರಣಿಗಳ ಬೆನ್ನು ಬೀಳುಲುದನ್ನು ಬಿಟ್ಟು, ಭಾರತೀಯ ಕ್ರೀಡಾಪಟುಗಳ ಕಷ್ಟಗಳ ಬಗ್ಗೆ ವರದಿ ಮಾಡಿ ಎಂದು ಹೇಳಿದ್ದಾರೆ.

ರಿಯೋ ಒಲಂಪಿಕ್ಸ್ ಗೆ ತೆರಳಿದ್ದ 30 ಅಥ್ಲೀಟ್ ಗಳು ಅಲ್ಲಿ ಅವರು ಶ್ರಮವಹಿಸಿ ನೀಡಿದ ಪ್ರದರ್ಶನದ ಬಗ್ಗೆ ದೇಶದ ಜನತೆಗೆ ತೋರಿಸಿ, ದೇಶದಲ್ಲಿರುವ ಕ್ರೀಡಾಪಟುಗಳ ಬಗ್ಗೆ ಜನತೆ ತಿಳಿದುಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.

10-12 ವರ್ಷಗಳ ಕಾಲ ಶ್ರಮ ವಹಿಸಿ ಕ್ರೀಡಾ ಪಟುಗಳು ತರಬೇತಿ ಪಡೆಯುತ್ತಾರೆ, ಒಂದು ವೇಳೆ ಅದರಲ್ಲಿ ಅವರು ಯಶಸ್ವಿಯಾಗದಿದ್ದರೇ ತಮ್ಮ ಕಷ್ಟಕರ ರೀತಿಯ ಅಭ್ಯಾಸದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com