
ಹನೋಯಿ: ವಿಯೆಟ್ನಾಂನೊಂದಿಗೆ 12 ಒಪ್ಪಂದಗಳಿಗೆ ಸಹಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ರಕ್ಷಣಾ ವಲಯದಲ್ಲಿ 500 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.
ವಿಯೆಟ್ನಾಂ ನೊಂದಿಗೆ ರಕ್ಷಣಾ ಸಹಕಾರ ಒಪ್ಪಂದವನ್ನು ವೃದ್ಧಿಗೊಳಿಸುವುದಕ್ಕೆ ಸಹಕಾರಿಯಾಗುವ ಒಪ್ಪಂದ ಮಾಡಿಕೊಳ್ಳಲಾಗಿದ್ದು ಗಸ್ತು ದಳದ ದೋಣಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನು ಉಭಯ ರಾಷ್ಟ್ರಗಳು ತಮ್ಮ ನಡುವಿನ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಯಿಂದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಗೆ ನವೀಕರಣಗೊಳಿಸಿವೆ.
ದ್ವಿಪಕ್ಷೀಯ ಮಾತುಕತೆ ಬಳಿಕ ವಿಯೆಟ್ನಾಂ ಪ್ರಧಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಉಭಯ ರಾಷ್ಟ್ರಗಳು ರಕ್ಷಣಾ ವಲಯದಲ್ಲಿ ಸಹಕಾರವನ್ನು ವೃದ್ಧಿಗೊಳಿಸಲು, ಸಮಾನ ಉದ್ದೇಶವನ್ನು ಮುಂದುವರಿಸಲು ತೀರ್ಮಾನಿಸಿವೆ ಎಂದು ಹೇಳಿದ್ದಾರೆ.
ಕಡಲಕರೆಯಾಚೆಯ ಗಸ್ತು ದೋಣಿಗಳ ನಿರ್ಮಾಣ ಒಪ್ಪಂದದ ಭಾಗವಾಗಿದ್ದು, ರಕ್ಷಣಾ ವಲಯದಲ್ಲಿ ವಿಯೆಟ್ನಾಂ ಗೆ 500 ಮಿಲಿಯನ್ ಡಾಲರ್ ನಷ್ಟು ನೆರವು ಘೋಷಣೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿಯೆಟ್ನಾಂ ವೇಗ ಆರ್ಥಿಕ ಅಭಿವೃದ್ಧಿ ಸಾಧಿಸುವ ರಾಷ್ಟ್ರಗಳಲ್ಲಿ ಒಂದಾಗಿದ್ದು, 1.25 ಬಿಲಿಯನ್ ಭಾರತೀಯರು ವಿಯೆಟ್ನಾಂ ನ ಅಭಿವೃದ್ಧಿ ಪಯಣದಲ್ಲಿ ಪಾಲುದಾರರಾಗಲು ಸಿದ್ಧರಿರುತ್ತಾರೆ ಎಂದು ಹೇಳಿದ್ದಾರೆ. ವಿಯೆಟ್ನಾಂ ನೊಂದಿಗೆ ಭಾರತದ ದ್ವಿಪಕ್ಷೀಯ ವ್ಯಾಪಾರ ಪ್ರಸ್ತುತ 7.8 ಬಿಲಿಯನ್ ಡಾಲರ್ ನಷ್ಟಿದ್ದು, 2020 ರ ವೆಳೆಗೆ 15 ಮಿಲಿಯನ್ ಡಾಲರ್ ನಷ್ಟಾಗುವ ಗುರಿ ಹೊಂದಲಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement