ರಾಂಚಿ: ಜಾರ್ಖಂಡ್ ನ ಖುತಿ ಜಿಲ್ಲೆಯಲ್ಲಿ ಭಾನುವಾರ ಮಾವೋ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಈ ಫರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರಾಂಚಿಯಿಂದ ಸುಮಾರು 70 ಕಿ,ಮೀ, ದೂರದಲ್ಲಿರುವ ಕರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾವೋ ಗುಂಪಿನ ಮಧ್ಯೆ ಪರಸ್ಪರ ಗುಂಡಿನ ದಾಳಿ ಹಾಗೂ ಹರಿತವಾದ ಮಾರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಮುಕೇಶ್, ರಾಹುಲ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಅಲ್ಲದೆ ಮತ್ತೊಂದು ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.
ಮೃತಪಟ್ಟವರು ಅಪರಾಧ ಹಿನ್ನೆಲೆಯನ್ನು ಹೊಂದಿದ್ದು, ಅವರೆಲ್ಲರೂ ಜಯಂತ್ ಸಾಹು ಮಾವೋ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.