ಅಂಕಣ ಬರೆದಿದ್ದಕ್ಕೆ ನನ್ನನ್ನು ಗಲ್ಲಿಗೇರಿಸಬೇಕಾ: ಅಶುತೋಷ್
ನವದೆಹಲಿ: ಎಎಪಿ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅಶುತೋಷ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ನಡುವೆ ತಿಕ್ಕಾಟ ಆರಂಭವಾಗಿದೆ.
ಸಂದೀಪ್ ಕುಮಾರ್ ಅವರನ್ನು ಸಮರ್ಥನೆ ಮಾಡಿಕೊಂಡು ಅಶುತೋಶ್ ಅವರು ಬರೆದಿರು ಬ್ಲಾಗ್ ಬಗ್ಗೆ ರಾಷ್ಚ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಆಕ್ಷೇಪ ವ್ಯಕ್ತ ಪಡಿಸಿದ್ದು, ನೋಟೀಸ್ ನೀಡಿದ್ದಾರೆ.
ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಅವರು, ಸೆಪ್ಟಂಬರ್ 8ರೊಳಗೆ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ಅಶುತೋಶ್ ಅವರಿಗೆ ಸೂಚಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು ನಿಮ್ಮ ಲೇಖನದಿಂದ ತುಂಬಾ ವಿಚಲಿತವಾಗಿದೆ. ನೀವು ತೀರಾ ಆಕ್ಷೇಪಾರ್ಹ ಹಾಗೂ ಹೇಸಿಗೆ ಹುಟ್ಟಿಸುವಂತ ಅಂಕಣ ಬರೆದಿದ್ದೀರಿ, ಆಪ್ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಸಿಡಿಯಲ್ಲಿ ಸಿಲುಕಿಕೊಂಡಿದ್ದು, ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ನೊಟೀಸ್ ನಲ್ಲಿ ಬರೆದಿದ್ದು, ಅದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಸಹಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅಶುತೋಷ್, ನೀವು ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದೀರಾ, ಆದರೆ ನೀವು ಇನ್ನೂ ಬಿಜೆಪಿ ಸದಸ್ಯೆ ಎಂದು ವೀಕಿಪೀಡಿಯಾ ಬರೆದಿದೆ. ಲಲಿತಾ ಕುಮಾರ ಮಂಗಳಂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯೆ, ಒಂದು ವೇಳೆ ನಾನು ಮಹಿಳಾ ಆಯೋಗಿದಿಂದ ನೊಟೀಸ್ ಬಂದರೆ ಮಾತ್ರ ಅದಕ್ಕೆ ಪ್ರತಿಕ್ರಿಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಶುತೋಷ್ ಹೇಳಿಕೆಗ ಪ್ರತಿಕ್ರಿಯಿಸಿರುವ ಲಲಿತಾ ಕುಮಾರ ಮಂಗಳಂ, ಯಾವ ರೀತಿಯ ಪತ್ರಕರ್ತರು ನೀವು, ಎರಡು ವರ್ಷ ನನ್ನ ಹಿಂದೆ ಇದ್ದೀರಿ, ನಾನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆಯಲ್ಲ, ನಾನು ಆಗಿದ್ದೆ, ನಾನು ಪಕ್ಷದ ವಕ್ತಾರೆ ಕೂಡ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ