
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸೇನೆ ಮೇಲೆ ಮತ್ತೆ ಉಗ್ರರು ದಾಳಿ ನಡೆಸಿದ್ದು, ಕಾಶ್ಮೀರದ ಹಂದ್ವಾರ ಜಿಲ್ಲೆಯ ಬಳಿ ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬುಧವಾರ(ಸೆ.7 ರಂದು) ಬೆಳಿಗ್ಗೆ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಮೂವರು ಯೋಧರಿಗೆ ತೀವ್ರ ಗಾಯಗಳುಂಟಾಗಿವೆ. ಸೇನಾ ಪಡೆ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದು, ಉಗ್ರರ ದಾಳಿಗೆ ಸೇನಾ ಪಡೆ ಪ್ರತಿ ದಾಳಿ ನಡೆಸಿದೆ. ದಾಳಿ ನಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸೇನಾ ಪಡೆ, ಉಗ್ರರು ದಾಳಿ ನಡೆಸಿರುವ ಪ್ರದೇಶವನ್ನು ಸುತ್ತುವರೆದಿದ್ದು, ಭಯೋತ್ಪಾದಕರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
Advertisement