ರಾಹುಲ್ ಗಾಂಧಿ
ದೇಶ
ಪ್ರಧಾನಿ ಮೋದಿ ವೇಗದ ರೈಲು ಬದಲು ವೇಗವಾಗಿ ದರ ಏರಿಕೆ ಮಾಡುತ್ತಿದ್ದಾರೆ: ರಾಹುಲ್
ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ವೇಗದ ರೈಲು ನೀಡುವ ಬದಲು ವೇಗವಾಗಿ ದರ ಏರಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ವೇಗದ ರೈಲು ನೀಡುವ ಬದಲು ವೇಗವಾಗಿ ದರ ಏರಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ.
ಬೇಡಿಕೆಗನುಗುಣವಾಗಿ ಅತಿ ವೇಗದ ರೈಲುಗಳ ಟಿಕೆಟ್ ದರ ಏರಿಕೆಯ ಆದೇಶದ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಡವರನ್ನು ಲೂಟಿ ಮಾಡಿ ಶ್ರೀಮಂತ ಉದ್ಯಮಿಗಳಿಗೆ ಲಾಭ ಮಾಡಿಕೊಡುವುದು ಪ್ರಧಾನಿ ಮೋದಿಯ ನಿಯಮ ಎಂದರು.
ಅತಿ ವೇಗದ ರೈಲುಗಳ ಸಂಖ್ಯೆ ಹೆಚ್ಚಳವಾಗದೇ ಇರುಹುದು. ಆದರೆ ಮೋದಿ ಅವರು ಅತಿ ವೇಗವಾಗಿ ರೈಲು ಟಿಕೆಟ್ ದರವನ್ನು ಹೆಚ್ಚಳ ಮಾಡಿ, ಅದನ್ನು ಕೆಲವು ತಮ್ಮ ಉದ್ಯಮ ಸ್ನೇಹಿತರಿಗೆ ಕಾಣಿಕೆಯಾಗಿ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಹೊಸ ನಿರ್ಧಾರದಂತೆ ರಾಜಧಾನಿ, ಡ್ಯೂರಾಂಟೊ ಮತ್ತು ಶತಾಬ್ದಿ ರೈಲುಗಳಲ್ಲಿ ಬೇಡಿಕೆಗನುಗುಣವಾಗಿ ರೈಲ್ವೆ ಟಿಕೆಟ್ ದರ ಏರಿಕೆ ಮಾಡುವ ಆದೇಶ ಹೊರಡಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ